Back to List

Kagga 289 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಆಳನೀಳಗಳ ಕಾಣಲ್ಕಾಗಿಸದೆ ಮೊರೆವ । ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ॥ ಪೇಳುವರದಾರು ನ್ಯಾಯಾನ್ಯಾಯ ವಿವರಗಳ । ಗಾಳಿಗಾಬರಿಯೆಲ್ಲ - ಮಂಕುತಿಮ್ಮ ॥ ೨೮೯ ॥

ALanILagaLA kANalkAgisade moreva । bALa kaDaloLu muLugi taLadindaleddu ॥ pELuvaradAru nyAyAnyAya vivaragaLa । gALigAbariyella - Mankutimma ॥ 289 ॥

Meaning in Kannada

ಜೀವನವನ್ನು ಸಾಗರ ಎಂದಿದ್ದಾರೆ. ಹೇಗೆ ಯಾರೂ ಕಡಲ ಒಳಹೊಕ್ಕು ಅದರ ಆಳ, ಉದ್ದ ಮತ್ತು ಅಗಲವನ್ನು ಕಂಡು ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಬದುಕೆಂಬ ಸಾಗರದ ಆಳಕ್ಕೆ ಹೊಕ್ಕು ಇದು ನ್ಯಾಯ, ಇದು ಅನ್ಯಾಯ ಎಂದು ಹೇಳುವವರಾರು. ಹಾಗೆ ಯಾರಾದರೂ ಹೇಳಿದರೆ, ಅದು ಕೇವಲ ಊಹಾಪೋಹ ಅಥವಾ ಹೆದರಿಕೆಯಿಂದ ಹೇಳಿದ ಮಾತು ಎಂದು ತಿಳಿಯಬೇಕು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"This life is like a dangerous sea. We can not know its depth or its expanse. Is there any one who can dive deep, touch its bottom (understand it completely), come back to surface and tell us what is good and what is not? Without such knowledgeable people, everything other people say are just hypothesis, rumors that cause fears." - Mankutimma

Themes

WisdomLifeMoralitySociety

Video Section

Video Coming Soon

Detailed video explanations by scholars and experts will be available soon.