Mankutimmana Kagga by D.V. Gundappa
ರಾಮನಿರ್ದಂದು ರಾವಣನೊಬ್ಬನಿರ್ದನಲ । ಭೀಮನಿರ್ದಂದು ದುಶ್ಶಾಸನನದೊರ್ವನ್ ॥ ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? । ರಾಮಭಟನಾಗು ನೀಂ - ಮಂಕುತಿಮ್ಮ ॥ ೨೮೮ ॥
rAmanirdandu rAvaNanobbanirdanala । bhImanirdandu dushshAsananadorvan ॥ E mahiyoLanyAyakAriyilladudendu? । rAmabhaTanAgu nIM - Mankutimma ॥ 288 ॥
ಅಂದು ತ್ರೇತಾಯುಗದಲಿ ರಾಮನಿದ್ದಾಗಲೇ ರಾವಣನೂ ಇದ್ದನಲ್ಲ! ಹಾಗೆಯೇ, ದ್ವಾಪರದಲ್ಲಿ ಭೀಮನಿದ್ದಾಗ ಒಬ್ಬ ದುಶ್ಶಾಸನನೂ ಇದ್ದನಲ್ಲವೇ? ಈ ಭೂಮಿಯಮೇಲೆ ಈ ರೀತಿ ಸಜ್ಜನರಿದ್ದಾಗ, ಅನ್ಯಾಯಗಳನ್ನು ಮಾಡುವವರೂ ಇಲ್ಲದ ಕಾಲವೇ ಇರಲಿಲ್ಲ.. ನೀನು ರಾಮನ ಭಂಟನಾಗು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"When there was Rama, there was a Ravana. When there was a Bheema, there was one Dushyasana. Is there any period in this world that did not have bad people? In your time, you should be on Rama's side (good side)." - Mankutimma
Video Coming Soon
Detailed video explanations by scholars and experts will be available soon.