Back to List

Kagga 287 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನರರ ಸ್ವಭಾವ ವಕ್ರಗಳನೆಣಿಸುವುದೇಕೆ? । ಗಿರಿ ಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ ॥ ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರರಲ್ತೆ? । ಅರಿತೊಗ್ಗು ಸಾಜಕ್ಕೆ - ಮಂಕುತಿಮ್ಮ ॥ ೨೮೭ ॥

narara svabhAva vakragaLaneNisuvudEke? । giri kaNivegaLa gaNisi rOShagoLLuveyEM? ॥ sure garala sudhegaL abdhiyali sOdararalte? । aritu oggu sAjakke - Mankutimma ॥ 287 ॥

Meaning in Kannada

ಮನುಷ್ಯರ ಸ್ವಭಾವಗಳ ವಕ್ರಗಳನ್ನು ಏಕೆ ನೀನು ಎಣಿಸುತ್ತೇಯೆ? ಭೂಮಿಯ ಮೇಲಿರುವುದೆಲ್ಲ ಬೆಟ್ಟ, ಗುಡ್ಡ, ಕಣಿವೆಗಳ ಕಂಡು ನೀ ಕೋಪಗೊಳ್ಳುವೆಯಾ? ಸಮುದ್ರ ಮಂಥನದಲ್ಲಿ ‘ಹಾಲಾಹಲವೆಂಬ ವಿಷ ಮತ್ತು ಅಮೃತ’ ಕ್ಷೀರಸಾಗರದ ಗರ್ಭದಿಂದ ಸಹೋದರರಂತೆ ಹೊರಬರಲಿಲ್ಲವೇ? ಈ ಏರುತಗ್ಗುಗಳು ಈ ಜಗತ್ತಿನಲ್ಲಿ ಸಹಜವಾಗೇ ಇವೆ ಎಂದು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.

Meaning & Interpretation

"Why are we so worried about varying natures and imperfections of people? Do we worry about the same kind of difference or imperfections on the face of the earth? There are mountains and valleys; But we don't get angry at any of them. Intoxicating alcohol, poison and elixir all came from the same exercise of churning the ocean. So, all of them are brotherly. One must understand this and accept people as they are with their innate qualities." - Mankutimma

Themes

WisdomSufferingNatureSociety

Video Section

Video Coming Soon

Detailed video explanations by scholars and experts will be available soon.