Back to List

Kagga 284 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವಋಣಗಳ ಲೆಕ್ಕದಾದಿಯರಿಯದ ನಾವು । ಆವುದನು ಸರಿಯೆನುವ?‌ತಪ್ಪಾವುದೆನುವ? ॥ ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ । ದೈವವದ ಹೊರಲಿ ಬಿಡು - ಮಂಕುತಿಮ್ಮ ॥ ೨೮೪ ॥

jIvaRuNagaLa lekkada Adiya ariyada nAvu । Avudanu sariyenuva? tappavudenuva? ॥ Ovo biDu kaDukaShTa nItinirNayada hore । daivavada horali biDu - Mankutimma ॥ 284 ॥

Meaning in Kannada

ಈ ಜಗತ್ತಿನಲ್ಲಿ ಜನಿಸುವ ಎಲ್ಲ ಜೀವಿಗಳು ತಮ್ಮ ಜನ್ಮದಿಂದ ಹೊತ್ತು ತರುವ ಋಣದ ಭಾರವೆಷ್ಟು, ಅದರ ರೂಪವೇನು, ಅದರಿಂದ ಜೀವಿಗಳು ತಮ್ಮ ತಮ್ಮ ಜೀವನದಲ್ಲಿ ಏನೆಲ್ಲಾ ಅನುಭವಿಸಬೇಕು, ಹಾಗೆ ಅನುಭವಿಸುವಾಗ ಅವರು ಮಾಡುವ ತಪ್ಪುಗಳೆಷ್ಟು ಮತ್ತು ಸರಿಗಳೆಷ್ಟು ಎಂಬ ಲೆಕ್ಕಾಚಾರವನ್ನು ಮಾಡುವುದು ಬಹಳ ಕಷ್ಟ. ಅದನ್ನು ನಾವು ವಿಚಾರಮಾಡದೆ ಅದರ ನಿರ್ಣಯವನ್ನು ಆ ಪರಮಾತ್ಮನಿಗೇ ಬಿಟ್ಟುಬಿಡುವುದು ಲೇಸು ಎಂದು ಹುಟ್ಟು ಮತ್ತು ಜೀವನದ ಲೆಕ್ಕಾಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"We do not know the beginning of this cycle of debt (or causation). How can we say something is right or wrong? Alas! it is very difficult, the burden of judgement of morality. Let us leave that job to fate." - Mankutimma

Themes

MoralityFateDetachment

Video Section

Video Coming Soon

Detailed video explanations by scholars and experts will be available soon.