Mankutimmana Kagga by D.V. Gundappa
ನಾಚಿಕೆಯನಾಗಿಪುವು ನಮ್ಮ ಸುಖದಾತುರದ । ಯೋಚನೆಗಳವನು ಮರುವಗಲು ಪರಿಕಿಸಲು ॥ ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು । ರೇಚನವದಾತ್ಮಕ್ಕೆ - ಮಂಕುತಿಮ್ಮ ॥ ೨೮೫ ॥
nAchikeyanu Agipuvu namma sukhadAturada । yOchanegaLu avanu maruvagalu parikisalu ॥ chAchidda rasane tAn oLasEdikoLLuvudu । rEchanavu adu Atmakke - Mankutimma ॥ 285 ॥
"ನಾವು ಇಂದು ಸುಖಪಡಲು ಆತುರಪಡುವುದನ್ನು ನಾವೇ ನಾಳೆ ಯೋಚಿಸಿದರೆ, ನಮಗೆ ನಾಚಿಯಾಗುತ್ತದೆ. ಲಾಲಸೆಯಿಂದ ಆತುರ ಪಡುವ ಮನಸ್ಸನ್ನು ಹಿಂತೆಗೆದುಕೊಂಡರೆ ಒಳಗಿದ್ದ ಹೊಲಸನ್ನು ಹೊರಹಾಕಿ, ಆತ್ಮ ಶುದ್ಧಿಯಾದಂತೆ" ಎಂದು ಮನುಷ್ಯನ ಆಸೆಗಳ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"We let our mind wander in search of pleasures. But when we think about it the next morning, we get embarrassed. We withdraw the tounge that was stretched out to taste (symbolic of us reeling our minds back under control). Such control is good for the soul. " - Mankutimma
Video Coming Soon
Detailed video explanations by scholars and experts will be available soon.