Mankutimmana Kagga by D.V. Gundappa
ರಾವಣನ ಹಳಿವವನೆ, ಜೀವವನೆ ಬಿಸುಡಿಸುವ । ಲಾವಣ್ಯವೆಂತಹುದೊ? ನೋವದೆಂತಹುದೊ? ॥ ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ । ಗಾವಿಲನ ಗಳಹೇನು? - ಮಂಕುತಿಮ್ಮ ॥ ೨೮೩ ॥
rAvaNana haLivavane, jIvavane bisuDisuva । lAvaNyavu entahudo? nOvu adentahudo? ॥ bEvasava paTTu tiLi; tiLidu haLiyuvoDe haLi । gAvilana gaLahEnu? - Mankutimma ॥ 283 ॥
ರಾವಣಾಸುರ ಸೀತೆಯನ್ನು ಅಪಹರಿಸಿದ್ದಕ್ಕೆ ಅವನನ್ನು ಕೆಟ್ಟವ ಎಂದು ಜನರೆಲ್ಲಾ ಅವನನ್ನು ಬಯ್ಯುತ್ತಾರೆ. ಆದರೆ ಪರಸ್ತ್ರೀಯನ್ನು ಹೊತ್ತುಕೊಂಡು ಹೋಗುವಂಥಾ ಹೇಯ ಕೃತ್ಯ ಮಾಡಲು ಪ್ರೇರೇಪಿಸಿದ ಆ ಸೀತೆಯ ಸೌಂದರ್ಯವೆಷ್ಟಿತ್ತೋ? ಮತ್ತು ಅವಳನ್ನು ಪಡೆಯಬೇಕೆಂಬ ಉತ್ಕಟ ಅಪೇಕ್ಷೆಯ ಯಾತನೆಯಷ್ಟಿತ್ತೋ? ಕಾರಣವ ಶ್ರಮಪಟ್ಟು ಅರಿತುಕೊ. ಅರಿತು ಮಾತನಾಡಿದರೆ ಸರಿ, ಅರಿಯದೆ ಏಕೆ ಮಾತನಾಡುವೆ? ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
"You may want to criticize Ravana for doing all the sins committed in Ramayana. But have you thought about his motive? Have thought how strong should that emotion (desire, revenge) be which pushed him to do so? How much pained was he because of these feelings? Try to understand his turmoil. After understanding, if you still want to criticize, go ahead. But criticizing without understanding is meaningless. " - Mankutimma
Video Coming Soon
Detailed video explanations by scholars and experts will be available soon.