Back to List

Kagga 282 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪಾಪವೆಂಬುದದೇನು ಸುಲಭಸಾಧನೆಯಲ್ಲ । ತಾಪದಿಂ ಬೇಯದವನ್ ಅದನೆಸಪನಲ್ಲ ॥ ವಾಪಿಯಾಳವ ದಡದಿ ನಿಂತಾತನರಿವನೇಂ? । ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ ॥ ೨೮೨ ॥

pApavembudu adEnu sulabha sAdhaneyalla । tApadim bEyadavan adanu esepanalla ॥ vApiyALava daDadi nintu Atana arivanEm? । pApiya edeyoLake iLiyo - Mankutimma ॥ 282 ॥

Meaning in Kannada

ಪಾಪ ಮಾಡುವುದು ಸುಲಭ ಸಾಧನೆಯಲ್ಲ. ಬದುಕಿನ ತಾಪದಿಂದ ಬೆಂದು ಬೆಂಡಾಗಿಹೋಗದ ಹೊರತು ಪಾಪಗಳನ್ನು ಮಾಡಲಾಗುವುದಿಲ್ಲ. ಭಾವಿಯ ದಡದಲ್ಲಿ ನಿಂತಿರುವವನಿಗೆ ಭಾವಿಯಾಳವು ತಿಳಿಯುವುದೇ? ಅದೇ ರೀತಿ ಪಾಪಿಯ ಹೃದಯದಾಳಕ್ಕಿಳಿದು ಅವನಂತರಾಳವನ್ನು ಅರಿತಿಕೋ ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"It is not very easy to commit sin. If one had a choice, they would never commit any sin. If someone commits any sin, there must be a strong reason why he did so. That reason may be hidden deep inside his mind and troubling him all along. One can not know the depth of the well by standing by its side. It can only be measured by getting into it. Instead of commenting on them, one must understand why any one commits sin." - Mankutimma

Themes

WisdomMorality

Video Section

Video Coming Soon

Detailed video explanations by scholars and experts will be available soon.