Mankutimmana Kagga by D.V. Gundappa
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? । ಆತುಮದ ಪರಿಕಥೆಯನರಿತವರೆ ನಾವು? ॥ ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ । ನೀತಿ ನಿಂದೆಯೊಳಿರದು - ಮಂಕುತಿಮ್ಮ ॥ ೨೮೧ ॥
pAtakiyoL Agrahava tOre nirmalanu yAru?। Atumada parikatheyanu aritavare nAvu? ॥ sOta durbalige salluvudu namma anukampe । nIti nindeyoLiradu - Mankutimma ॥ 281 ॥
ಯಾರೋ ಒಬ್ಬನನ್ನು ‘ಇವನು ಪಾಪಿ,ಪಾತಕಿ’ ಎಂದು ಬೆರಳು ತೋರಲು ಇಲ್ಲಿ ಯಾರೂ ಸಂಪೂರ್ಣ ನಿರ್ಮಲರು ಇಲ್ಲವಲ್ಲ! ಮತ್ತೊಬ್ಬರ ಆಂತರ್ಯವನ್ನು ಸಂಪೂರ್ಣವಾಗಿ ಅರಿತವರು ಯಾರಿದ್ದಾರೆ ಹೇಳಿ? ಸೋತವರಿಗೆ ಅಥವಾ ಕೆಳಗೆಬಿದ್ದವರಿಗೆ ನಮ್ಮ ಅನುಕಂಪವಿರಬೇಕು, ನಿಂದೆಯಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Those who feel angry at a sinner; are they pure? Who knows why any one does what they do? They may have failed to resist against desire. The defeated deserve our sympathies. It is not wise to berate them." - Mankutimma
Video Coming Soon
Detailed video explanations by scholars and experts will be available soon.