Back to List

Kagga 280 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೋಷಿಯವನಿವನು ಪಾಪಿಯೆನುತ್ತ ಗಳಹದಿರು । ಆಶೆಯೆನಿತವನು ಸಹಿಸಿದನೊ! ದಹಿಸಿದನೊ! ॥ ವಾಸನೆಗಳವನನೇನೆಳದವೋ ಬಲವೆನೊ! । ಪಾಶಬದ್ಧನು ನರನು - ಮಂಕುತಿಮ್ಮ ॥ ೨೮೦ ॥

dOShiyavan ivanu pApi enutta gaLahadiru । Asheyenitavanu sahisidano! dahisidano! ॥ vAsanegaLu avananEnu eLadavO balaveno! । pAshabaddhanu naranu - Mankutimma ॥ 280 ॥

Meaning in Kannada

ಜಗತ್ತಿನಲ್ಲಿ ಯಾರನ್ನೂ, ಅವನು ದೋಷಿ, ಇವನು ಪಾಪಿಯೆಂದು ಹೇಳುತ್ತಾ ಇರಬೇಡ. ಪಾಪ ಅವನು ಎಷ್ಟೊಂದು ಆಸೆಗಳನ್ನು ಹೊತ್ತು, ತೀರಿಸಿಕೊಳ್ಳಲಾಗದೆ ಸಹಿಸಿದ್ದಾನೋ, ಹಾಗೆ ತೀರಿಸಿಕೊಳ್ಳಲಾಗದ ಎಷ್ಟೊಂದು ಆಸೆಗಳನ್ನು ಸುಟ್ಟಿದ್ದಾನೋ ನಿನಗೆ ಗೊತ್ತಿಲ್ಲವಲ್ಲ. ಅವನ ಪಾಪ-ದೋಷಗಳೆಲ್ಲವೂ ಅವನು ಹೊತ್ತು ತಂದ ವಾಸನೆಗಳು, ಅವನನ್ನು ತನ್ನ ಪಾಶದಲ್ಲಿ ಬಂಧಿಸಿ,ಬಲವಾಗಿ ಅವನನ್ನು ತನ್ನ ಸೆಳೆತದಲ್ಲಿ ಸಿಕ್ಕಿಸಿಕೊಂಡಿದ್ದರಿಂದ ಆದದ್ದು ಎಂದು ‘ವಿಧಿವಿಲಾಸದ’ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Don't single out people and call them as imperfect and sinners. Who knows how many desires he had to fight against? How many he endured? How many he burnt? Sensory pleasures pull him strongly in all direction. Man is always bound by his desires." - Mankutimma

Themes

DeathMoralitySocietyWar

Video Section

Video Coming Soon

Detailed video explanations by scholars and experts will be available soon.