Mankutimmana Kagga by D.V. Gundappa
ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? । ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ॥ ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ । ಸಮೆಯಿಸುವನಾಯುವನು - ಮಂಕುತಿಮ್ಮ ॥ ೨೭೯ ॥
yamanigEke apakIrti? nararu balu karuNigaLe? । mamateyino rOShadino hAsyadino hEgO ॥ nimiShanimiShamum orvanu innorvananu tikki। sameyisuvanu Ayuvanu - Mankutimma ॥ 279 ॥
ಯಮ ಎಂದರೆ ಸಾವನ್ನು ತರುವವನು. ಅವನ ಲೋಕ, ತೀವ್ರವಾದ ಕಷ್ಟಗಳನ್ನು ಅನುಭವಿಸಬೇಕಾದ ನರಕ, ಎಂಬ ಅಪಕೀರ್ತಿ ಮನುಜಲೋಕದಲ್ಲಿ ಇದೆಯಲ್ಲವೇ? ಅದು ಏಕೆ? ಇಲ್ಲಿರುವ ಕಾಲದಲ್ಲೇ ಪ್ರೀತಿಯಿಂದಲೋ ದ್ವೇಷದಿಂದಲೋ ಅಥವಾ ಹಾಸ್ಯದಿಂದಲೋ ಪ್ರತೀ ನಿಮಿಷವೂ ಎಲ್ಲ ಒಬ್ಬೊಬ್ಬರೂ ಮತ್ತೊಬ್ಬರೊಡನೆ ಹೊಡೆದಾಡಿ ಹೋರಾಡಿ ತಮ್ಮ ತಮ್ಮ ಆಯಸ್ಸನ್ನು ಕಳೆಯುತ್ತಿಲ್ಲವೇ. ಹಾಗಾಗಿ ಇಲ್ಲಿರುವ ನರರೂ ಸಹ ಕರುಣಾಮಯಿಗಳೇನಲ್ಲ, ಎಂದು ಜಗತ್ತಿನಲ್ಲಿ ಮನುಷ್ಯರ ಬಾಳಿನ ಒಂದು ಪರಿಯನ್ನು ವಿಶ್ಲೇಷಣೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
"Why should one consider Yama (Lord of death) harsh? Is man very kind to his own kind? Either through love, compassion, anger or fun he creates emotions in those around him. This emotional roller coaster every minute erodes life out of people minute by minute." - Mankutimma
Video Coming Soon
Detailed video explanations by scholars and experts will be available soon.