Back to List

Kagga 275 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ । ಜೀವನಪರೀಕ್ಷೆ ಬಂದಿದಿರು ನಿಲುವನಕ ॥ ಭಾವಮರ್ಮಂಗಳೇಳುವುವಾಗ ತಳದಿಂದ । ದೇವರೇ ಗತಿಯಾಗ - ಮಂಕುತಿಮ್ಮ ॥ ೨೭೫ ॥

sarvarum sAdhugaLe sarvarum bOdhakare । jIvana parIkShe bandu idiru niluvanaka ॥ bhAva marmangaLu ELuvuvu Aga taLadinda । dEvarE gatiyAga - Mankutimma ॥ 275 ॥

Meaning in Kannada

ಈ ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರಂತೆ, ಬೋಧಕರಂತೆ ಕಾಣುತ್ತಾರೆ. ಆದರೆ ಎಲ್ಲರೂ ಹಾಗಾಡುವುದು, ಜೀವನ ಅವರನ್ನು ವಿಷಮ ಸ್ಥಿತಿಯಲ್ಲಿ ನಿಲ್ಲಿಸಿ ಪರೀಕ್ಷೆಗೆ ಒಡ್ದುವತನಕ ಮಾತ್ರ. ಹಾಗೆ ಪರೀಕ್ಷೆಗೆ ಒಳಗಾದ ಪ್ರತಿಯೊಬ್ಬನಿಗೂ ತನ್ನಂತರಂಗದಲ್ಲಿ ಸತ್ಯದರಿವಾದಾಗ ಅವನನ್ನು ದೇವರೇ ಕಾಪಾಡಬೇಕು ಎಂದು ಒಂದು ಪರಮ ಸತ್ಯವನ್ನು ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸಿದ್ಡಾ ರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Until life poses a difficult question every one is noble and preachers. When life becomes difficult, feelings (and illusions) arise from deep down their heart. Only God can save us then." - Mankutimma

Themes

DevotionLifeLove

Video Section

Video Coming Soon

Detailed video explanations by scholars and experts will be available soon.