Mankutimmana Kagga by D.V. Gundappa
ನಯದಿಂದ ಸೋಕು, ನೀಂ ದಯೆಯಿಂದ ನೋಡದನು । ಭಯದಿನೋಲಗಿಸು, ನೀಂ ಪೂಜೆಗೈಯದನು ॥ ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ । ಪ್ರಿಯತಮವೊ ಸೃಷ್ಟಿಯಲಿ - ಮಂಕುತಿಮ್ಮ ॥ ೨೭೪ ॥
nayadinda sOku, dayeyinda nODadanu । bhayadinOlagisu, nIm pUjehaiyadanu ॥ svayam ankurita sakala vishva sattvavo; jIva । priyatamavo sRuShtiyali - Mankutimma ॥ 274 ॥
ಈ ಜೀವವೆನ್ನುವುದು ಸಮಸ್ತ ಸೃಷ್ಟಿಯಲಿ ಅತೀ ಪ್ರಿಯತಮವು. ಅದು ತಾನೇ ತಾನಾಗಿ ‘ಆಗಿ’ ಸೃಷ್ಟಿಯ ಸಮಗ್ರ ಸತ್ವದಿಂದ ಕೂಡಿದೆ. ಹಾಗಾಗಿ ಅದನ್ನು ನಯದಿಂದ ಸ್ಪರ್ಶಿಸು, ದಯೆಯಿಂದ ನೋಡು, ಭಯದಿಂದ ಓಲೈಸು ಮತ್ತು ಸದಾಕಾಲ ಅದನ್ನು ಪೂಜೆ ಮಾಡು, ಎಂದು ಆತ್ಮ ತತ್ವವಾದ ವಿಚಾರ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು.
"The life that you have is part of the cosmic spirit that resides in your body. You have to treat it with love and compassion. You should be very wary of doing anything that would hurt it. You should worship it. Life inside us should be the most loved thing in this creation." - Mankutimma
Video Coming Soon
Detailed video explanations by scholars and experts will be available soon.