Mankutimmana Kagga by D.V. Gundappa
ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು । ಕೋಟಿ ಹೃದಯದ ಹೋಹೊ ಹಾಹಕಾರಗಳು ॥ ಕೂಟ ಕೂಡಿಹುವಂತರಿಕ್ಷದಲಿ ನೀನದರಿನ್ । ಓಟವೋಡುವುದೆತ್ತ? - ಮಂಕುತಿಮ್ಮ ॥ ೨೭೩ ॥
kOTi deseyusirugaLu, kOTi rasadAvigaLu । kOTi hRudayada hOho hAhakAragaLu ॥ kUTa kUDihuvu antarikshadali nIn adarin । OTavODuvudetta? - Mankutimma ॥ 273 ॥
ಕೋಟಿ ಕೋಟಿ ಜೀವಿಗಳ ಉಸಿರಾಟದ ಭಾವ, ಜಗತ್ತಿನ ಕೋಟಿ ಕೋಟಿ ವಸ್ತುಗಳ ರಸದ ಆವಿ,ಕೋಟಿ ಕೋಟಿ ಹೃದಯಗಳ ಸಂತಸದ ಮತ್ತು ಕಾರ್ಪಣ್ಯದ ನಿಟ್ಟುಸಿರು ಎಲ್ಲವೂ ಕೂಡಿದ ಭಾವವೆಲ್ಲ ಅಂತರಿಕ್ಷದಲ್ಲಿ ತುಂಬಿಕೊಂಡಿರುವಾಗ ನೀನು ಅದರಿಂದ ತಪ್ಪಿಸಿಕೊಂಡು ಓಡುವುದಾದರೂ ಎಲ್ಲಿಗೆ? ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"This world has crores of creatures all going through their lives just as you are doing. All of them may have their tired moments, happy moments, moments of savoring the beauties of the world. There are cries of excitement, sorrow, encouragement let out by them. All these are making formations in the sky. How can you escape from this world? No matter where you go, these cries will always follow you. Some of them are yours too." - Mankutimma
Video Coming Soon
Detailed video explanations by scholars and experts will be available soon.