Back to List

Kagga 272 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೊಮ್ಮನೇ ಸಂಸೃತಿಯ ಕಟ್ಟಿಕೊಂಡುತ್ಸಹಿಸೆ । ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ॥ ಜನ್ಮ ಸಾಕೆನುವುದೇ? ದುಮ್ಮಾನವಡುವುದೇಂ? । ಚಿಮ್ಮುಲ್ಲಸವ ಧರೆಗೆ - ಮಂಕುತಿಮ್ಮ ॥ ೨೭೨ ॥

bommanE samsRutiya kaTTikonDu utsahise । summane arechaNavirade prakRuti toDagutire ॥ janma sAkenuvudE? dummAnavaDuvudEm? । chimmullasava dharege - Mankutimma ॥ 272 ॥

Meaning in Kannada

ಈ ಜಗತ್ತೆಂಬ ಸಂಸಾರವನ್ನು ಕಟ್ಟಿಕೊಂಡು ಆ ಪರಮಾತ್ಮನೇ ಇಷ್ಟೊಂದು ಉತ್ಸಾಹದಿಂದ ಇರುವಾಗ, ಅವನ ಸೃಷ್ಟಿಯಾದ ಈ ಪ್ರಕೃತಿಯು ಒಂದು ಅರೆಕ್ಷಣವೂ ಸುಮ್ಮನಿರದೆ ಈ ತನ್ನ ಕೆಲಸದಲ್ಲಿ ನಿರತವಾಗಿರುವಾಗ, " ನನಗೆ ಈ ಜನ್ಮ ಸಾಕು, ನಾನೇಕೆ ಬದುಕ ಬೇಕು?" ಎನ್ನುವಂತ ದುಮ್ಮಾನಗಳು ನಿನಗೇಕೆ? ಬದುಕಿರುವಾಗ ಉತ್ಸಾಹದಿಂದ ಬದುಕಿ, ಈ ಜಗತ್ತಿಗೂ ಉತ್ಸಾಹವನ್ನು ನೀಡು ಎಂದು ಒಂದು ಬುದ್ಧಿವಾದವನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"The creator himself is engrossed in building this world. Nature is not wasting even fraction of a second and is pumping joy into this creation. Is it right for us to give up on life? Is it right for us to doubt the intentions (of the creator/nature)?" - Mankutimma

Themes

LifeMoralityNatureSelf

Video Section

Video Coming Soon

Detailed video explanations by scholars and experts will be available soon.