Mankutimmana Kagga by D.V. Gundappa
ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ । ಚೆಲ್ವರೂಪಿಂ ಬಂದು ಕಣ್ಕುಕ್ಕುವನಕ ॥ ವಲ್ಗುರೂಪೆ ಸುಭದ್ರೆ ಕಣ್ಮುಂದೆ ಸುಳಿವನಕ । ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ ॥ ೨೭೬ ॥
ellarum jitamanaskare daiva vidhi mAye । chelvarUpim bandu kaNkukkuvanaka ॥ valgurUpe subhadre kaNmunde suLivanaka । phalguNanu samnyAsi - Mankutimma ॥ 276 ॥
ತನ್ನ ಅಣ್ಣನ ಆದೇಶದ ಮೇಲೆ, ಒಂದು ವರ್ಷ ಕಾಲ ಸನ್ಯಾಸಿಯಾಗಿದ್ದ ಅರ್ಜುನನೂ ಸಹ ಕಣ್ಣು ಕೋರೈಸುವ ಸುಂದರಿಯಾದ ಸುಭದ್ರೆ ಕಣ್ಣ ಮುಂದೆ ಸುಳಿಯಲು ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡು ಅವಳಲ್ಲಿ ಅನುರಕ್ತನಾಗಲಿಲ್ಲವೇ? ಹಾಗೆಯೇ ಈ ಜಗತ್ತಿನ ಎಲ್ಲರೂ, ತಾವು ಯಾವುದಕ್ಕೂ ಆಸೆಪಡದ, ಮನಸ್ಸನ್ನು ಗೆದ್ದವರಂತೆ ಇದ್ದರೂ, ದೈವ ನಿಯಮಿತ ವಿಧಿ, ಮಾಯೆಯರೂಪದಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಂತಾಗ ವಿಚಲಿತರಾಗುತ್ತೇವೆ ಎಂದು ಒಂದು ಜಗತ್ಸತ್ಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Everyone has conquered his mind as long as divine illusion does not bring in a beautiful form in front of you to taunt your senses. Arjuna was a celibate saint untill the beautiful Subhadra came infront of him." - Mankutimma
Video Coming Soon
Detailed video explanations by scholars and experts will be available soon.