Mankutimmana Kagga by D.V. Gundappa
ಸುಂದರವನೆಸಗು ಜೀವನದ ಸಾಹಸದಿಂದೆ । ಕುಂದಿಲ್ಲವದಕೆ ಸಾಹಸಭಂಗದಿಂದೆ ॥ ಮುಂದಕದು ಸಾಗುವುದು ಮರಳಿ ಸಾಹಸದಿಂದೆ । ಚೆಂದ ಧೀರೋದ್ಯಮವೆ - ಮಂಕುತಿಮ್ಮ ॥ ೨೬೯ ॥
sundaravanu esagu jIvanada sAhasadinde । kundillavadake sAhasa bhangadinde ॥ mundakadu sAguvudu maraLi sAhasadinde । chenda dhIrOdyamave - Mankutimma ॥ 269 ॥
ಸಾಹಸದಿಂದ ನಿನ್ನ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡು. ನಿನ್ನ ಸಾಹಸದ ಪ್ರಯತ್ನದಲ್ಲಿ ಭಂಗ ಉಂಟಾದರೆ ತೊಂದರೆಯಿಲ್ಲ. ಏಕೆಂದರೆ ಮರಳಿ ಯತ್ನವನ್ನು ಮಾಡಲು ಅದು ಪ್ರೇರಕವಾಗುತ್ತದೆ. ಹೀಗೆ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಲು ಬದುಕಿನಲ್ಲಿ ಸಾಹಸ ಮಾಡುವುದೇ ಚೆಂದ ಎಂದು " ಒಂದು ಒಳ್ಳೆಯ" ಬದುಕಿನ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.
"One must put in hard work in life and create wonderful things. When hard work does not yeild results, the spirit must not be subdued. One must proceed ahead again with renewed vigor. This courage in man's efforts is what makes this world beautiful." - Mankutimma
Video Coming Soon
Detailed video explanations by scholars and experts will be available soon.