Mankutimmana Kagga by D.V. Gundappa
ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ । ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ॥ ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- । ವಲ್ಲಗಳೆಯದಿರವನು - ಮಂಕುತಿಮ್ಮ ॥ ೨೭೦ ॥
ellerigam Agi tAn, ellarum tanagAgi । nilluva EkAtmateya bALveyim kaliyal ॥ salluva upakaraNagaLu mane rAjya samsArava । allagaLeyadir avanu - Mankutimma ॥ 270 ॥
ಈ ಜಗತ್ತಿನಲ್ಲಿ ಎಲ್ಲರಿಗಾಗಿ ನಾನು, ಎಲ್ಲರೂ ನನಗಾಗಿ ಎಂದು ಬಾಳಬೇಕು. ಈ ರೀತಿ ಬಾಳಿನಲ್ಲಿ ಏಕಾತ್ಮ ಭಾವವನ್ನು ಕಲಿಯಲು ನಮಗೆ ಸಿಗುವ ಉಪಕರಣಗಳೇ ಮನೆ, ರಾಜ್ಯ ಮುಂತಾದವುಗಳು. ಅವಗಳನ್ನು ಅಲ್ಲಗಳೆಯದಿರು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Be available to help every one. Be open to receive help from others. Learn to live in harmony like thus. To live ones life, one needs support structure around him - house, state and the world. Don't belittle them." - Mankutimma
Video Coming Soon
Detailed video explanations by scholars and experts will be available soon.