Back to List

Kagga 268 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? । ಚಾಚುದಿಹುದಾತ್ಮ ನಾಲಗೆಯ ದೆಸೆದೆಸೆಗೆ ॥ ಬಾಚಿಕೊಳಲಮೃತಕಣಗಳನೆಲ್ಲ ತನ್ನೆಡೆಗೆ । ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ॥ ೨೬೮ ॥

nAchikeyadEke nIm badukinali sogavaDalu? । chAchutihudu Atma nAlageya desedesege ॥ bAchikoLalu amRuta kaNagaLanella tanneDege । sAja sogavu Atmange - Mankutimma ॥ 268 ॥

Meaning in Kannada

ಬದುಕಿನಲಿ ಸುಖಪಡಲು ನೀನೇಕೆ ನಾಚಿಕೊಳ್ಳುತ್ತೀಯ? ನಿನ್ನಾತ್ಮವು ಈ ಜೀವನದ ಸುಖವನ್ನು ಪಡೆಯಲು, ಸುಖದ ಪ್ರತಿಘಳಿಗೆಯನ್ನೂ ತನ್ನೆಡೆಗೆ ಸೆಳೆದುಕೊಳ್ಳಲು,ನಾಲ್ಕೂ ದಿಕ್ಕುಗಳಿಗೆ ತನ್ನನ್ನು ತಾನು ಚಾಚಿಕೊಂಡಿದೆ.ಆನಂದಪಡುವುದೇ ಆತ್ಮದ ಸಹಜ ಗುಣ ಎಂದು ವೇದಂತದ ಒಂದು ವಿಚಾರವನ್ನು ಮಂಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Why should one be ashamed of enjoying life? The soul is spreading its tongue towards all directions to lick all available drops of elixir. Pursuit of happiness is natural to the soul." - Mankutimma

Themes

LifeWar

Video Section

Video Coming Soon

Detailed video explanations by scholars and experts will be available soon.