Mankutimmana Kagga by D.V. Gundappa
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು । ಬಾಲರೇಂ ನಾವಿನ್ನುಮೆನುತ ಪಲ್ಕಡಿದು ॥ ಖೇಲನವ ಬೇಡವೆನುವರನು ವಿಧಿರಾಯನವ- । ಹೇಳಿಪನು ಸೆರೆವಿಡಿದು - ಮಂಕುತಿಮ್ಮ ॥ ೨೬೭ ॥
lIleyEm bALella? ChI taLLu hAsyavanu । bAlarEm nAvinnum enuta palkaDidu ॥ KElanava bEDavenuvaranu vidhirAyanu । avahELipanu sereviDidu - Mankutimma ॥ 267 ॥
ನಾವೇನು ಚಿಕ್ಕಮಕ್ಕಳೇನು? ಈ ಜಗತ್ತು ಮತ್ತು ಈ ಜಗತ್ತಿನ ಬದುಕು ಒಂದು ನಾಟಕ ಮತ್ತು ಇದು ಆ ಜಗನ್ನಾಟಕ ಸೂತ್ರಧಾರಿಯಾಡಿಸುವ ಆಟ ಎಂದು, ಇದಕ್ಕೆ ನಮ್ಮನ್ನು ನಾವು ಚಕಾರವೆತ್ತದೆ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತೀರಾ? ತಮಾಷೆಮಾಡಬೇಡಿ ಎಂದು ಹಾಗೇನೂಇಲ್ಲ!! ಎಂದು ಈ ಜಗತ್ತನ್ನು ಅವಹೇಳನ ಮಾಡುವವರನ್ನು ಈ ಜೀವನ ಬೇಡವೆನ್ನುವವರನ್ನೂ ಸಹ ಆ ವಿಧಿರಾಯ ಸೆರೆಹಿಡಿದು ಬದುಕಲೇ ಬೇಕೆಂದು ವಿಧಿಸುತ್ತಾನೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Is all life just an illusion? Don't treat us like kids. We may get angry at who ever is running the Universe and opt to get out of the game. Fate will catch hold of those people and make them play the game again." - Mankutimma
Video Coming Soon
Detailed video explanations by scholars and experts will be available soon.