Back to List

Kagga 264 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗೋಳಾಡಲುಂ ಬೇಡ, ಲೋಲಾಪ್ತಿಯುಂ ಬೇಡ । ಬಾಳು ಪರಚೇತನದ ಕೇಳಿಯೆಂದೆಣಿಸಿ ॥ ಪಾಲಿಗನು ನೀನದರೊಳೆನಿಪಂತೆ ಬಾಳುತಿರು । ಕೇಳಿಯುಂ ಧರ್ಮವೆಲೊ - ಮಂಕುತಿಮ್ಮ ॥ ೨೬೪ ॥

gOLADalum bEDa, lOlAptiyum bEDa । bALu parachEtanada kELiyindeNisi ॥ pAliganu nInu adaroLenipante bALutiru । kELiyum dharmavelo - Mankutimma ॥ 264 ॥

Meaning in Kannada

ಈ ಜಗತ್ತಿನ ಬದುಕು ಸರಿಯಿಲ್ಲವೆಂಬ ಗೋಳಾಟವೂ ಬೇಡ ಅಥವಾ ಈ ಜಗತ್ತಿನ ಜೀವನದಲ್ಲಿ ಅತಿಯಾದ ಆಸಕ್ತಿಯೂ ಬೇಡ. ಈ ನಮ್ಮ ಬಾಳು ಆ ಪರಮಾತ್ಮನ ಆಟ ಮತ್ತು ನಾವು ಅದರೊಳಗಿನ ಒಂದು ಪಾಲನ್ನು ಹಂಚಿಕೊಂಡು ನಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ ಮತ್ತು ಬಾಳುತ್ತಿದ್ದೇವೆ ಎಂದು ಅಂದುಕೊಳ್ಳಬೇಕು. ಏಕೆಂದರೆ "ಹಾಗೆ ಬಾಳುವುದು ಧರ್ಮ" ಎಂದು ಬಾಳನ್ನು ಹೇಗೆ ಜೀವಿಸಬೇಕೆಂಬ ಒಂದು ಸತ್ಯವನ್ನು ಪ್ರತಿಪಾದಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Don't whine. Don't indulge nad revel either. Live life as if it is controlled by the whims of the cosmic spirit. You are just playing a part in the grand scheme of things that he Cosmic Spirit is well in control of. Its whim is not arbitrary, it also follows the rules of Dharma." - Mankutimma

Themes

LifeMorality

Video Section

Video Coming Soon

Detailed video explanations by scholars and experts will be available soon.