Mankutimmana Kagga by D.V. Gundappa
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? । ತಾಳಿದರೆ ಬಾಳನಂತಹರುಮ್ ಆಶೆಯಲಿ? ॥ ಕಾಲವಿನ್ನಿರದಿಂತು ನಾಳೆ ನೋಡುವಮೆನುತ । ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ॥ ೨೬೩ ॥
bALu pALu ennuvara biTTihude bedakATa? । tALidare bALantaharum Asheyali? ॥ kAlavu inniradintu nALe nODuvam enuta । mElane nirIkShiparu - Mankutimma ॥ 263 ॥
ಈ ಜೀವನ ಜಂಜಾಟಗಳ ಆಗರ, ಇದು ಹಾಳು ಎಂದು ಹೇಳುವವರನ್ನೂ ಈ ಬಾಳಿನ ಬೆದಕಾಟ ಬಿಟ್ಟಿಲ್ಲ ಅಲ್ಲವೇ? ತಾಳಿದರೆ ಬಾಳುವೆನು ಎನ್ನುವಾಶೆಯಲಿ ಬಾಳಿದರೆ, ಒಳ್ಳೆಯದು. ಏಕೆಂದರೆ ಕಾಲವು ಎಂದಿಗೂ ಹೀಗೇ ಇರುವುದಿಲ್ಲ. ಇಂದು ಇರುವುದಕ್ಕಿಂತ ಉತ್ತಮ ಕಾಲವನ್ನು ನಿರೀಕ್ಷಿಸುತ್ತಾ ಎಲ್ಲರೂ ಬದುಕುತ್ತಾರೆ, ಎಂದು ಜೀವನದ ಒಂದು ಸತ್ಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"People may say Life is a waste. But have they given up the struggle? Do they not wait patiently for better days to come? Even they know that time will not remain like this forever and always look forward for a better tomorrow." - Mankutimma
Video Coming Soon
Detailed video explanations by scholars and experts will be available soon.