Mankutimmana Kagga by D.V. Gundappa
ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು । ಕೀಳದೆನಿಪವನೊರಟ, ಮಂಕ, ಕಲ್ಲೆದೆಗ ॥ ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದರಿವ । ಮೇಲೆನಿಪವನೆ ರಸಿಕ - ಮಂಕುತಿಮ್ಮ ॥ ೨೬೫ ॥
bALa siri sogasugaLa perchipanu khElakanu । kILadu enipavanu oRaTa, manka, kalledega ॥ tOLinde tiLivinde nuDiyinde jagadariva । mElenipavane rasika - Mankutimma ॥ 265 ॥
ಈ ಜಗತ್ತಿನ ಸುಂದರತೆಯನ್ನು ಹೆಚ್ಚಿಸುತ್ತಲೇ ಇರುತ್ತಾನೆ, ಈ ಜಗನ್ನಾಟಕ ಸೂತ್ರಧಾರಿ. ಇದನ್ನು ಕೀಳು ಎಂದು ಎನ್ನುವವನು ಒರಟ ,ಮಂಕ ಮತ್ತು ಕಲ್ಲು ಮನದವನು. ತನ್ನ ಬಾಹುಬಲದಿಂದ, ಅರಿವಿನ ಬಲದಿಂದ ಮತ್ತು ಮಾತಿನ ಚಮತ್ಕಾರದಿಂದ, ಈ ಜಗತ್ತಿನ ಬದುಕನ್ನು ಉತ್ತಮವಾಗಿಸುವವನೆ, ರಸಿಕ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"The master of the game has shown us all the riches and the beauties of the world. Don't say all these worldly things are inferior to the pursuit of the supreme. If you say so, you will be brash, dim-wit and a person with a stone heart. People who try to understand this world by muscle strength, intellect, words and appreciate it are called tasteful." - Mankutimma
Video Coming Soon
Detailed video explanations by scholars and experts will be available soon.