Mankutimmana Kagga by D.V. Gundappa
ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ । ಇಕ್ಷುದಂಡದವೊಲದು ಕಷ್ಟಭೋಜನವೆ ॥ ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ । ಮಾಕ್ಷಿಕರು ಮಿಕ್ಕೆಲ್ಲ - ಮಂಕುತಿಮ್ಮ ॥ ೨೬೦ ॥
drAkShi rasavEnalla jIvanada tiruLu Argam । ikShudanDavol adu kaShTa bhOjanave ॥ dakShateyina iDiyuvange onderaDu guTuku rasa । mAkShikaru mikella - Mankutimma ॥ 260 ॥
ಬಾಯಿಗಿಟ್ಟ ತಕ್ಷಣ ಸಿಗುವ ದ್ರಾಕ್ಷಿಹಣ್ಣಿನ ರಸದ ರುಚಿಯಂತೆ ಅಲ್ಲ, ಅದು ಕಬ್ಬಿನ ಜಲ್ಲೆಯನ್ನು, ಬಾಯಲ್ಲೇ ಸಿಪ್ಪೆ ತೆಗೆದು ಅಗಿದಾಗ ಮಾತ್ರ ಸಿಗುವ ಸಿಹಿರಸದ ಎರಡು ಹನಿಯಂತೆ ಈ ಜೀವನದ ಸ್ವಾರಸ್ಯವೂ ಯಾರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಕಷ್ಟಪಡಬೇಕು. ಹಾಗೆ ಪಡದಿದ್ದ ಪಕ್ಷದಲ್ಲಿ, ಕಬ್ಬಿನ ಜಲ್ಲೆಯಮೇಲೆ ಕುಳಿತ ನೊಣಗಳಿಗೆ ಹೇಗೆ ರಸ ಸಿಗುವುದಿಲ್ಲವೋ ಹಾಗೆ, ಬದುಕಿನ ಅನುಭವ, ಸ್ವಾರಸ್ಯ ಯಾವುದೂ ಸಿಗುವುದಿಲ್ಲ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Nuances of life is not like drinking grape juice (which is very easy). It is more like getting sugarcane juice from the cane. If one is determined and puts in the effort he will get couple of gulps of juice. That's it. Rest of them are like flies sitting on crushed cane - they get close, but can not taste the juice. " - Mankutimma
Video Coming Soon
Detailed video explanations by scholars and experts will be available soon.