Back to List

Kagga 259 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಡಲ ಕಡೆದರು ಸುರಾಸುರರು ನಿಜಬಲದಿಂದ । ಕುಡಿದನದನು ತಪಸ್ಸಿನಿಂದ ಕುಂಭಜನು ॥ ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? । ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ॥ ೨೫೯ ॥

kaDala kaDedaru sura asuraru nija baladinda । kuDidanadanu tapassininda kumbhajanu ॥ kaDamejana pAragAmbare gAsiyanu paDade? । poDavi bALveyuyumantu - Mankutimma ॥ 259 ॥

Meaning in Kannada

ಅಮೃತವನ್ನು ಪಡೆಯಲು ಸುರರು ಮತ್ತು ಅಸುರರು ಸಮುದ್ರಮಂಥನವನ್ನು ಮಾಡಿದರು. ಅದು ದೈವೀ ಶಕ್ತಿ. ಆದರೆ ತನ್ನ ತಪಸ್ಸಿನ ಶಕ್ತಿಯಿಂದ ಅಗಸ್ತ್ಯನು ಆ ಸಮುದ್ರವನ್ನು ಒಂದೇ ಗುಟುಕಿಗೆ ಕುಡಿದುಬಿಟ್ಟನು. ಆದರೆ ಮಾನವ ಶಕ್ತಿಯನ್ನು ಹೊಂದಿದ ಹುಲುಮಾನವರಾದ ನಾವು ಕಷ್ಟ ಪಡದೆ ಈ ಭವಸಾಗರವನ್ನು ದಾಟಿ ಆ ದಡವನ್ನು ಸೇರಲಾಗುವುದೇ? ಹೇಗೆ ಕಷ್ಟಪಟ್ಟು ಜೀವಿಸುವುದೇ ಈ ಬಾಳಿನ ಸ್ವಭಾವ. ಎಂದು ಒಂದು ವಾಸ್ತವವನ್ನು ನಮ್ಮೆದುರಿಗೆ ಇಡುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"The Gods and Demons churned the sea from their muscle strength and got amazing returns. From the strength derived from his penance Agasthya could drink the entire ocean. These were great men who could accomplish the feats with ease. But lesser mortals can not achieve greatness without struggle. Its like living a forest where every day is a struggle." - Mankutimma

Themes

DevotionLifeDeathSufferingWarPeace

Video Section

Video Coming Soon

Detailed video explanations by scholars and experts will be available soon.