Mankutimmana Kagga by D.V. Gundappa
ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು । ಉಲ್ಲಾಸಕೆಡೆಮಾಡು ನಿನ್ನನಾದನಿತು ॥ ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ । ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ॥ ೨೫೮ ॥
olle enadiru bALan, olavadEn ennadiru । ullAsake eDemADu ninna Adanitu ॥ nillu kecchedeyindalu anyAyagaLanu aLise । ellakaM siddhaniru - Mankutimma ॥ 258 ॥
ಈ ಬಾಳನ್ನು ಬೇಡ ಎನ್ನದಿರು. "ಈ ಜೀವನದ ಮೇಲೆ ಏಕಿಷ್ಟು ಒಲವು" ಎನ್ನದಿರು. ನಿನ್ನ ಮನಸ್ಸಿನಲ್ಲಿ ಸಂತೋಷಕ್ಕೆ ಎಡೆಮಾಡಿಕೊಡು. ನಿನ್ನ ಕೈಲಾದಷ್ಟು ಸ್ಥಿರವಾಗಿ,ದೈರ್ಯವಾಗಿ ನಿಂತು ಜಗತ್ತಿನ ಅನ್ಯಾಯಗಳನ್ನು ಅಳಿಸಲು, ಎಲ್ಲ ರೀತಿಯ ಪರಿಸ್ಥಿತಿಗಳನ್ನೂ ಎದುರಿಸಲು ಸದಾ ಸಿದ್ದನಿರು ಎಂದು ಒಂದು ಸ್ಪಷ್ಟ ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Don't say no to Life. Don't be ignorant of love. Cut yourself a little slack and make room for liesure. Don't worry about the injustices meted out to you. Face them with courage and be ready for everything." - Mankutimma
Video Coming Soon
Detailed video explanations by scholars and experts will be available soon.