Mankutimmana Kagga by D.V. Gundappa
ಪರಕಿಹವೆ ಸೋಪಾನವೆಂದು ನೀನೊಪ್ಪುವೊಡೆ । ಪರಕಿಂತಲಿಹವೆಂತು ಜೊಳ್ಳದಾದೀತು? ॥ ಹೊರಲೆಬೇಕಂತಾದೊಡಿಹದ ಹೊರೆಗಳನೆಲ್ಲ । ಜರೆವುದೇಕಿನ್ನದನು? - ಮಂಕುತಿಮ್ಮ ॥ ೨೫೭ ॥
parakihave sOpAnavendu nInu oppuvoDe । parakintalu ihaventu joLLadAdItu? ॥ horalebEkantAdoDe ihada horegaLanella । jareyudu Ekinnadanu? - Mankutimma ॥ 257 ॥
ಪರವನ್ನು ಸೇರಲು ಇಹವೆ ಮೆಟ್ಟಿಲು ಎಂದು ನೀನು ಒಪ್ಪುವುದಾದರೆ, ಇಹವು ಪರಕ್ಕಿಂತ ಜೋಳ್ಳಾಗುವುದೆಂತು? ಈ ಜಗತ್ತಿನಲ್ಲಿ ನಾವು ಬಂದಮೇಲೆ, ನಮ್ಮ ಬದುಕಿನ ಹೊರೆಗಳನ್ನು ಹೊರಲೆಬೇಕು ಎಂದು ಆದರೆ ಈ ಇಹದ ಬದುಕನ್ನು ಹಳಿಯುವುದು ಏಕೆ ? ಎಂದು ಒಂದು ಬದುಕಿನ ಸೂಕ್ಷ್ಮ ವಿಚಾರವನ್ನು ವಿಮರ್ಶೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"If you agree that a good after-life (in another world) is based on what we do in this world now. Then, how can we belittle what we do here? Actions here are as important as in the other world. In order to pass to the next, we have to bear all the troubles (and happiness) in this world without any exception. Then why frown up on this world?" - Mankutimma
Video Coming Soon
Detailed video explanations by scholars and experts will be available soon.