Mankutimmana Kagga by D.V. Gundappa
ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ । ತೊರೆದಾಯಸಂಗೊಳ್ಳೆ ದೊರೆವ ಫಲವೇನು? ॥ ಸುರಧನುವಿಗೇಣಿಯಿಡಹೊರಟು ನಿನ್ನಂಗಳದ । ಕಿರಿಹೂವ ಮರೆಯುವೆಯ - ಮಂಕುತಿಮ್ಮ ॥ ೨೫೬ ॥
parada mele kaNNiTTu dhareya tucCha venutta । toreda AyasangoLLe doreva phalavEnu? ॥ suradhanuvige ENi idahoraTu ninnangaLada । kirihuuva mareyuveya - Mankutimma ॥ 256 ॥
ನಾವು, ಈ ಜಗತ್ತಿನಲ್ಲಿ ಹುಟ್ಟಿ, ಇದು ಕಳಪೆಯಾಗಿದೆ, ಇದು ಕೀಳು, ಎನ್ನುತ್ತಾ, ನಮಗೆ ಗೊತ್ತಿಲ್ಲದ ಆ ಸ್ವರ್ಗಕ್ಕೆ ಅಥವಾ ಸುರಲೋಕಕ್ಕೆ ಆಸೆಪಟ್ಟು, ಇದನ್ನು ತೊರೆದರೆ ಏನು ಫಲ? "ಆಕಾಶದಲ್ಲಿನ ಕಾಮನ ಬಿಲ್ಲಿಗೆ ಆಸೆಪಟ್ಟು ನಿನ್ನ ಮನೆಯ ಅಂಗಳದಲ್ಲಿ ಅರಳಿದ ಒಂದು ಸಣ್ಣ, ಆದರೂ ಸುಂದರ ಹೂವನ್ನು ಕಡೆಗಣಿಸುವೆಯಾ?" ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Having kept your sight on the other world (calling it better), you consider this world to be inferior (and not worthy of efforts). If you give up efforts in this world then how can you get good results in the other world? You are trying to keep a ladder to climb up to a rainbow and forgetting about the small beautiful flower in your backyard." - Mankutimma
Video Coming Soon
Detailed video explanations by scholars and experts will be available soon.