Mankutimmana Kagga by D.V. Gundappa
ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು । ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ॥ ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ । ನಿಂದಿರುವುದಲೆ ಧರ್ಮ - ಮಂಕುತಿಮ್ಮ ॥ ೨೫೩ ॥
andandige Adanitu buDa kaTTi kaLe tegedu । chenda taLiru dinadinamu mogeye nIreredu ॥ sanda baladinda jagada ashvattha sEveyali । nindiruvudale dharma - Mankutimma ॥ 253 ॥
ಇದು ನಮಗೆ ಜೀವಿಸುವ ಬಗೆಯ ತತ್ವವನ್ನು ಬೋಧಿಸುವ ಕಗ್ಗ. ಒಂದು ಸಣ್ಣ ಅರಳೀ ಸಸಿಯನ್ನು ತಂದು, ಭೂಮಿಯಲ್ಲಿ ಗುಣಿ ತೋಡಿ, ಸಸಿ ನೆಟ್ಟು, ಪ್ರತಿನಿತ್ಯ ಬೊಗಸೆ ಬೊಗಸೆಯಲ್ಲಿ ನೀರನ್ನು ಎರೆದು, ಕಳೆ ತೆಗೆದು ಅದನ್ನು ಕಾಪಾಡಿ ಒಂದು ಬೃಹತ್ವೃಕ್ಷವನ್ನಾಗಿಸಿದಂತೆ, ಈ ಜಗದಶ್ವತ್ಥದ ಸೇವೆಯಲಿ ನಿಲ್ಲುವುದೇ ಧರ್ಮವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
"Everyday one must tend to this tree as much or as little life permits. He must make the root stable, take out the weeds, pour water. The tree takes strength from this care and gives out beautiful sprouts and grows. It is best if we stand at the service of this tree that symbolises our entire world." - Mankutimma
Video Coming Soon
Detailed video explanations by scholars and experts will be available soon.