Mankutimmana Kagga by D.V. Gundappa
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು । ಸಂದಿಹುದು ಚಿರನವತೆಯಶ್ವತ್ಥಮರಕೆ ॥ ಎಂದೆಂದುಮಂತಿರುವುದೀ ವಿಶ್ವವೃಕ್ಷವದ । ರೊಂದು ರೆಂಬೆಯೊ ನೀನು - ಮಂಕುತಿಮ್ಮ ॥ ೨೫೨ ॥
ondu kombeyu bADalu innodu chiguruvudu । sandihudu chira navateyu ashvattha marake ॥ endendum antiruvudI vishva vRukShavu adara । ondu rembeyo nInu - Mankutimma ॥ 252 ॥
ಅಶ್ವತ್ಥಮರದ ಒಂದು ಕೊಂಬೆ ಒಣಗಿದರೆ ಮತ್ತೊಂದು ಚಿಗುರುತ್ತದೆ.ಹೇಗೆ ಆ ಮರವು ತನ್ನ ಚಿರನೂತನತೆಯನ್ನು ಕಾಪಾಡಿಕೊಳ್ಳುತ್ತದೋ, ಹಾಗೆಯೇ ಸಕಲ ಜೀವರಾಶಿಗಳಿಂದ ಕೂಡಿದ ಈ ಜಗತ್ತೆಂಬ ವಿಶ್ವ ವೃಕ್ಷವೂ ಎಂದೆಂದೂ ಬಾಡದೆ ಇರುತ್ತದೆ. ಅಂತಹ ವಿಶ್ವವೃಕ್ಷದ,ಒಂದು ರೆಂಬೆ ನೀನೆಂದು ತಿಳಿ, ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
"If one branch wilts, another one sprouts. Thus this banyan tree is bestowed with endless freshness. This tree will be like this for ever and every day. You are just one branch of it." - Mankutimma
Video Coming Soon
Detailed video explanations by scholars and experts will be available soon.