Back to List

Kagga 251 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಲೆಯಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು । ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು ॥ ಬೆಳೆವುದೀ ಪರಿಯರಳಿಮರದಂತೆ ನರಕೋಟಿ । ನಲಿವನದರಲಿ ಬೊಮ್ಮ - ಮಂಕುತಿಮ್ಮ ॥ ೨೫೧ ॥

taleya mEgaDe bEru, keLage kombe ele chiguru । bILalUregaLa lekkakilla kone modalu ॥ beLevudI pariya araLi maradante narakOTi । nalivanu adarali bomma - Mankutimma ॥ 251 ॥

Meaning in Kannada

ಒಂದು ಅರಳಿ ಮರದ ಕೊಂಬೆಯಿಂದಬಿಳಲುಗಳು ಹೊರಟು ಭೂಮಿಯನ್ನು ಮುಟ್ಟಿ, ಮತ್ತೆ ಭೂಮಿಯೊಳಕ್ಕೆ ನುಸುಳುತ್ತದೆ. ಇದು ಮೇಲಿನ ಬೇರು ಆ ಬೇರು ಮೇಲಿದ್ದು ಕೊಂಬೆಗಳು, ಎಲೆಗಳು ಮತ್ತು ಚಿಗುರು, ಅರಳೀ ಮರದಲ್ಲಿ ಕೆಳಗಿರುತ್ತದೆ. ಅದೇ ರೀತಿ ಜೀವ ಧರಿಸಿದ ದೇಹ ಹಳತಾಗುತ್ತದೆ, ಮೇಲಿದ್ದರೂ ಮುಂದೆ ವಂಶದಲ್ಲಿನ ಅನ್ಯ ಶಾಖೆಗಳಿಗೆ ಮತ್ತು ಚಿಗುರಂಥ ಮಕ್ಕಳು ಮೊಮ್ಮಕಳಿಗೆ ಬೇರಂತೆ ಆಧಾರವಾಗಿರುತ್ತದೆ. ಇಂತಹ ಕೋಟಿ ಕೋಟಿ ಮರಗಳ ಬೇರುಗಳ ಕೊಂಬೆಗಳ ಮತ್ತು ಚಿಗುರುಗಳ ಪ್ರತಿರೂಪವಾದ ಕೋಟಿ ಕೋಟಿ ನರರಿರುವ ಈ ಜಗತ್ತಿನಲ್ಲಿ ಪರಮಾತ್ಮ ನಲಿವಿನಿಂದ ಆನಂದದಿಂದ ನಲಿಯುತ್ತಾನೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"The roots are above its head. Below are the branches and the fresh sprouts. The shoots that supports it are countless. There is neither a beginning nor any end to this banyan tree. Just like the tree, mankind (and the rest of nature) grows unhindered. The creator is just revelling in his own creation." - Mankutimma

Themes

DeathNaturePeace

Video Section

Video Coming Soon

Detailed video explanations by scholars and experts will be available soon.