Mankutimmana Kagga by D.V. Gundappa
ಜೀವನವದೊಂದು ಪರಮೈಶ್ವರ್ಯ ಬೊಮ್ಮನದು । ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ॥ ಈವರಾರ್ ಕೊಳುವರಾರೆಲ್ಲರೊಂದಾಗಿರಲು? । ನೈವೇದ್ಯಭಾಗಿ ನೀಂ - ಮಂಕುತಿಮ್ಮ ॥ ೨೫೦ ॥
jIvanavu adondu paramaishvarya bommandu । sEveyadanu UrjitangoLisuvalli esaka ॥ eevarAr koLuvarAr ellaru ondAgiralu? । naivEdya bhAgi nIm - Mankutimma ॥ 250 ॥
ಈ ಜಗತ್ತು ಮತ್ತು ಇಲ್ಲಿ ನಡೆಯುವ ಜೀವಿಗಳ ಜೀವನವು ಆ ಪರಮಾತ್ಮ ತನ್ನ ವಿನೋದಕ್ಕಾಗಿ ಸೃಷ್ಟಿಸಿಕೊಂಡ ಸಂಪತ್ತು. ಇದು ಅವನಿಗೆ ಸೇರಿದ್ದು. ಇಲ್ಲಿರುವ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಇದ್ದು ಅನುಭವಿಸಿ, ತಮ್ಮ ಎಲ್ಲ ಕೆಲಸಗಳನ್ನೂ ಅದನ್ನು ಊರ್ಜಿತಗೊಳಿಸುವುದರಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲವೂ ಅವನದೇ ಆಗಿ ಎಲ್ಲವೂ ಅವನೇ ಆಗಿರುವಾಗ ಇಲ್ಲಿ ಕೊಡುವವನೂ ಮತ್ತು ತೆಗೆದುಕೊಳ್ಳುವವನೂ ಬೇರೆ ಬೇರೆ ಅಲ್ಲ.ಈ ಜಗತ್ತಿನ ಸಕಲ ಪ್ರಾಣಿಗಳ ಜೀವನವನ್ನು ಸಮಗ್ರ ಬಾಳಿನ ನೈವೇದ್ಯದಂತೆ ಆ ಪರಮಾತ್ಮನಿಗೆ ನಿವೇದನೆ ಮಾಡುತ್ತಿರುವಾಗ ನಾವೆಲ್ಲಾ ಅದರೊಳಗೆ ಒಂದು ಭಾಗವನ್ನು ಹಂಚಿಕೊಂಡಿದ್ದೇವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗ್ಗದಲ್ಲಿ
"Life is a precious wealth. But that belongs the creator. We are living it only to materialize His whims and wishes. In this process we exchange so many things with other fellow creatures. But how can we separate who is the giver or who is the taker, when all of them are part of the same One. All of your experiences - good or bad - are just handed over to you by Him." - Mankutimma
Video Coming Soon
Detailed video explanations by scholars and experts will be available soon.