Mankutimmana Kagga by D.V. Gundappa
ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- । ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ॥ ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ । ಬಾಳು ಬಾಳದೆ ಬಿಡದು - ಮಂಕುತಿಮ್ಮ ॥ ೨೪೯ ॥
hALu hALella bALu ennutirdoDeyum adara । ULigava tappisuva jANanellihanu? ॥ ULigavo kALagavo kULkareyo gOLkareyo । bALu bALade biDadu - Mankutimma ॥ 249 ॥
ಈ ಜಗತ್ತಿನಲ್ಲಿ ಇರುವ ಮನುಷ್ಯರೆಲ್ಲಾ ಯಾವುದಾದರೂ ಒಂದು ರೀತಿಯ ಸಂಕಷ್ಟಗಳಿಗೆ ಸಿಕ್ಕು " ಅಯ್ಯೋಈ ಬಾಳೆಲ್ಲ ಹಾಳು " ಎಂದು ಈ ಜೀವನವನ್ನು ಹಳಿಯುತ್ತಿದ್ದರೂ, ಈ ಜಂಜಡದ ಬದುಕಿನಲ್ಲಿ ಜೀವಿಸುವುದನ್ನು ತಪ್ಪಿಸಿಕೊಂಡಂಥಾ ಜಾಣನೆಲ್ಲಿಹನು? ಪರಿರಿಗೆ ಊಳಿಗವನ್ನೋ, ಕಾಳಗವನ್ನೋ ಹೊಟ್ಟೆಪಾಡಿಗಾಗಿ ಗೋಳಾಡುತ್ತಲಾದರೂ ಈ ಜಗತ್ತಿನ ಪ್ರತೀ ಜೀವಿಯೂ ಬಾಳಲೇ ಬೇಕು ಎಂದು ಬದುಕಿನಒಂದು ಅನಿವಾರ್ಯತೆಯನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.
"One may say - all life is a waste, futile. But having said so, is there any one smart enough to free himself from its bondage? Misery or battle, happiness or sadness - one has to live his life. Life does not give you a choice not to." - Mankutimma
Video Coming Soon
Detailed video explanations by scholars and experts will be available soon.