Mankutimmana Kagga by D.V. Gundappa
ತೆರಿಗೆಗಳು ಹಲವುಂಟು ಪ್ರಕೃತಿಗಂ ಸಲ್ಲುವುವು । ತೆರದೆ ನೀಂ ಮರೆಯೆ ದಂಡಿಪಳಾಕೆ ಮುನಿದು ॥ ಕರಣಂಗಳಾಕೆಯವು ಮಿತದೊಳವುಗಳ ಬಳಸಿ । ತೆರು ಸಲುವ ಬಾಡಿಗೆಯ - ಮಂಕುತಿಮ್ಮ ॥ ೨೪೮ ॥
terigegaLu halavunTu prakRutigam salluvuvu । terade nIm mareye danDipaLu Ake munidu ॥ karaNangaLu Akeyavu mitadoL avugala baLasi । teru saluva bADigeya - Mankutimma ॥ 248 ॥
ನಾವು ಈ ಜಗತ್ತಿನಲ್ಲಿ ವಾಸಿಸುವಾಗ ತೆರಬೇಕಾದ ತೆರಿಗೆಗಳು ಹಲವಾರು ಉಂಟು. ಅವುಗಳಲ್ಲಿ ಪ್ರಕೃತಿಗೂ ಕೆಲವು ಸಲ್ಲುವುವು. ಅವುಗಳನ್ನೇನಾದರೂ ಸಲ್ಲಿಸದೆ ಇದ್ದರೆ ಪ್ರಕೃತಿ ವಿಧಿಸುವ ಶಿಕ್ಷೆಗೆ ಗುರಿಯಾಗಬೇಕು. ಪ್ರಕೃತಿ ದತ್ತವಾದ ಎಲ್ಲವೂ ನಮಗೆ ಜೀವಿಸುವುದಕ್ಕೆ ಉಪಕರಣಗಳಿದ್ದಂತೆ. ಅವುಗಳನ್ನು ಮಿತವಾಗಿ ಬಳಸಿಕೊಳ್ಳಬೇಕು ಮತ್ತು ಅದಕ್ಕೆ ಸಲ್ಲಬೇಕಾದ ಬಾಡಿಗೆಯನ್ನು ನೀಡಲೇಬೇಕು ಎಂದು ಈ ಜಗತ್ತಿನಲ್ಲಿ ನಮ್ಮ ಜೀವನ ಹೇಗಿರಬೇಕೆಂದು ಮಾನ್ಯ ಗುಂಡಪ್ಪನವರು ಸೂಚಿಸಿದ್ದಾರೆ ಈ ಕಗ್ಗದಲ್ಲಿ .
"There are many taxes that are due to nature from us (and rightly so). If you forget to pay, then she will punish. But she has all the apparatus needed to make progress. We should use them in moderation and pay her the rent for them." - Mankutimma
Video Coming Soon
Detailed video explanations by scholars and experts will be available soon.