Mankutimmana Kagga by D.V. Gundappa
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ । ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ॥ ಮನುಜರ ಪರಸ್ಪರೋದ್ರೇಕ ಜಗದ ವಿಲಾಸ । ಮನವೆ ಪರಮಾದ್ಭುತವೊ - ಮಂಕುತಿಮ್ಮ ॥ ೨೪೭ ॥
manadinda manake pArvudu bALina uriya kiDi । maneyinda manege aleva gALi hogeyante ॥ manujara paraspara udrEka jagada vilAsa । manave parama adbhutavo - Mankutimma ॥ 246 ॥
ಒಂದು ಮನೆಯಲ್ಲಿ ಹಚ್ಚಿದ ಒಲೆಯ ಹೊಗೆ ಮತ್ತೊಬ್ಬರ ಮನೆಗೂ ನುಗ್ಗುವಂತೆ,ಒಬ್ಬರ ಮನಸ್ಸಿನ ಬೇಗೆ ಮತ್ತೊಬ್ಬರ ಮನಸ್ಸಿಗೆ ತಾಗುತ್ತದೆ. ಹೀಗ ಜಗತ್ತಿನಲ್ಲಿನ ಮನುಷ್ಯರ ಪರಸ್ಪರ ಉದ್ರೇಕಗಳ ವಿಲಾಸಕ್ಕೆ ಕಾರಣವಾದ ಮನುಷ್ಯನ ಮನಸ್ಸು ಪರಮಾತ್ಮನ ಅದ್ಭುತ ಸೃಷ್ಟಿಗಳಲ್ಲಿ ಒಂದು, ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು
"Worries in life travel from mind to mind when people exchange their thoughts and fears. Just like wind carries smoke from house to house. The beauty of this world is that minds of men feed on each others anxiety and creates spectacle. Mind is a miracle." - Mankutimma
Video Coming Soon
Detailed video explanations by scholars and experts will be available soon.