Mankutimmana Kagga by D.V. Gundappa
ಪ್ರೇಮಬೀಜಗಳಿಹುವು ವೈರಬೀಜಗಳವೊಲೆ । ಸೌಮ್ಯಮುಂ ಸಂಕ್ಷೋಭೆಯಂತೆ ಪ್ರಕೃತಿಯಲಿ ॥ ಭ್ರಾಮಕದ ಸೃಷ್ಟಿಯಾ ವಿಷಮಲಕ್ಷಣಗಳಲಿ । ಸಾಮರಸ್ಯವನರಸೊ - ಮಂಕುತಿಮ್ಮ ॥ ೨೪೬ ॥
prEmabIjagaLu ihuvu vaira bIjagaLavole । saumyamum sankShObheyante prakRutiyali ॥ bhrAmakada sRuShTiyA viShama lakShaNagaLali । sAmarasyavanu araso - Mankutimma ॥ 246 ॥
ಈ ಪ್ರಕೃತಿಯಲಿ, ಸೌಮ್ಯ ಮತ್ತು ಸಂಕ್ಷೋಭೆಯ ಭಾವಗಳಿರುವಂತೆ, ಪ್ರೇಮಕ್ಕೆ ಮತ್ತು ದ್ವೇಷಕ್ಕೂ ಕಾರಣಗಳಿವೆ. ಭ್ರಮೆಯನ್ನುಂಟುಮಾಡುವಂಥಾ ಸೃಷ್ಟಿಯ ಬೇರೆ ಬೇರೆ ಲಕ್ಷಣಗಳಲ್ಲಿ, ನೀನು ಸಮರಸವನ್ನು ಹುಡುಕು ಎಂದು ಒಂದು ಆದೇಶವನ್ನು ಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"In this world there are seeds of love, just like there are seeds of hatred. Just like there is peace and calm, there is misery and turmoil in this nature. Seeing all these contradictions in this creation, our mind may wander. But we must strive to search for the truth that unifies them all." - Mankutimma [Translator's note: Scientists are still struggling to find a unified theory that explains gravitation, electro magnetic forces, subatomic forces - strong and weak.]
Video Coming Soon
Detailed video explanations by scholars and experts will be available soon.