Mankutimmana Kagga by D.V. Gundappa
ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು? । ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ॥ ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ । ಒಲವಾತ್ಮವಿಸ್ತರಣ - ಮಂಕುತಿಮ್ಮ ॥ ೨೪೫ ॥
kolegaDikanu enipa huli salahadEm marigaLanu? । olumekaruLa aDagihudu pagetanada poDeyoL ॥ nalumeyanu horahommisuvudu narana unnatike । olavu Atma vistaraNa - Mankutimma ॥ 245 ॥
ಕೊಲೆಗಡುಕ ಪ್ರಾಣಿಯೆಂದು ಹೆಸರ ಪಡೆದ ಹುಲಿ, ಪ್ರೀತಿಯಿಂದ ತನ್ನ ಮರಿಗಳನ್ನು ಸಲಹುವುದಿಲ್ಲವೇ? ಆದ್ದರಿಂದ ಒಲುಮೆ ಮತ್ತು ಹಗೆತನ ಎರಡೂ ಅಂತರ್ಯದಲ್ಲಿರುತ್ತದೆ. ಅವರವರ ಅವಶ್ಯಕತೆಯಂತೆ ಭಾವಗಳನ್ನು ಹೊರಗೆ ವ್ಯಕ್ತಪಡಿಸುದು ಸಹಜ. ಹಾಗೆ ನಲುಮೆಯನ್ನು ವ್ಯಕ್ತಪಡಿಸುವುದು ನರನ ಔನ್ನತ್ಯ. ಆತ್ಮದ ಗುಣವೇ ಆನಂದವಾದ್ದರಿಂದ ಒಲವನ್ನು ತೋರುವುದು ಆತ್ಮದ ಗುಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
"You may call a tiger cruel and a murderer. But does it not care for its own cubs? It shows that it is capable of love that is hidden in its belly - deep inside its body that shows off only hatred. So is the innate nature of man. But his greatness is in getting the love out into open. That love is also a means to enrich his soul." - Mankutimma
Video Coming Soon
Detailed video explanations by scholars and experts will be available soon.