Mankutimmana Kagga by D.V. Gundappa
ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ । ಕೋಟಿ ನಟರಾಂತಿಹರು ಚಿತ್ರಪಾತ್ರಗಳ ॥ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ । ನೋಟಕರು ಮಾಟಕರೆ - ಮಂಕುತಿಮ್ಮ ॥ ೨೫೪ ॥
nATakava nODu brahmAnDa ranga sthaladi । kOTi naTarAntiharu chitra pAtragaLa ॥ ATakke katheyilla modalilla kaDeyilla । nOTakaru mATakare - Mankutimma ॥ 254 ॥
ಇಡೀ ಬ್ರಹ್ಮಾಂಡವೇ ಒಂದು ರಂಗಸ್ಥಳ. ಈ ರಂಗಸ್ಥಳದಲ್ಲಿ ನಡೆಯುವ ನಾಟಕವ ನೋಡು. ಈ ನಾಟಕದಲ್ಲಿ ಚಿತ್ರ ವಿಚಿತ್ರ ಪಾತ್ರಗಳ ಧರಿಸಿ ಕೋಟಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳ ಧರಿಸಿದ್ದಾರೆ. ಈ ನಾಟಕದ ಕಥೆಗೆ ಮತ್ತು ಇಲ್ಲಿ ನಡೆಯುವ ಪ್ರತಿಯೊಂದೂ ಅಂಕಕ್ಕೂ, ಮೊದಲಿಲ್ಲ, ಕೊನೆಯಿಲ್ಲ. ಎಲ್ಲರೂ ಪಾತ್ರಧಾರಿಗಳಾಗಿಯೂ ಪ್ರೇಕ್ಷಕರಾಗಿಯೂ ಇದ್ದಾರೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Look at the drama happening on the stage of the Universe. Crores o people are playing colorful characters. This drama has no plot, no beginning and no ending. Here, the audience are also part of the act and play characters." - Mankutimma
Video Coming Soon
Detailed video explanations by scholars and experts will be available soon.