Mankutimmana Kagga by D.V. Gundappa
ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ । ಯಮರಾಜನೊಬ್ಬ ಜಾಠರರಾಜನೊಬ್ಬ ॥ ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು । ಶಮಿಸಿ ಮುಗಿಸುವನೊಬ್ಬ - ಮಂಕುತಿಮ್ಮ ॥ ೨೪೩ ॥
smavartigaLu jagadoLibbarE diTavariye । yamarAjanobba jAThararAjanobba ॥ shramavanu anudinamum Agipanobbanu ellavanu । shamisi mugisuvanobba - Mankutimma ॥ 243 ॥
ಈ ಜಗದಲ್ಲಿ ಸಮಭಾವವಿರುವವರು ಇಬ್ಬರೇ. ಒಬ್ಬ ಜಠರರಾಜ.ಇನ್ನೊಬ್ಬ ಯಮರಾಜ. ಒಬ್ಬ ನಮ್ಮೆಲ್ಲರನ್ನೂ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಪ್ರತಿನಿತ್ಯ ಶ್ರಮಪಡುವಂತೆ ಪ್ರೇರೇಪಿಸುವ, ಜಠರದಲ್ಲಿ ಅಡಗಿರುವ ರಾಜ, "ವೈಶ್ವಾನರ" ಮತ್ತು ನಮ್ಮ ಜೀವನದ ಶ್ರಮವನ್ನೆಲ್ಲ ಶಮನಗೊಳಿಸಿ ಜೀವ ಮತ್ತು ದೇಹದ ಸಂಬಂಧವನ್ನು ಅಂತ್ಯಗೊಳಿಸುವವನು ಆ ಯಮರಾಜ. ಈ ಸತ್ಯವನ್ನು ನಾವು ಅರಿತುಕೊಳ್ಳಬೇಕು ಎಂದು ಒಂದು ಜಗತ್ ಸೂಕ್ಷ್ಮವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"There are only two people who treat every one uniformly. One is Yama, the God of death and the other is the King of stomach (hunger). Hunger will haunt every one and force them to do something or other every day. The other will take every thing away and put an end to everyone." - Mankutimma
Video Coming Soon
Detailed video explanations by scholars and experts will be available soon.