Mankutimmana Kagga by D.V. Gundappa
ಐಕ್ಯ ನಾನಾತ್ವಗಳು, ನಿಯತಿ ಸ್ವತಂತ್ರಗಳು । ತರ್ಕ್ಯ ನಿಸ್ತರ್ಕ್ಯಗಳು ಬೆರತು ಚಿತ್ರದಲಿ ॥ ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ । ಸಿಕ್ಕಗಳ ಕಂತೆ ಜಗ - ಮಂಕುತಿಮ್ಮ ॥ ೨೪೨ ॥
aikya nAnAtvagaLu, niyati svatantragaLu । tarkya nistarkyagaLu beratu chitradali ॥ shakyamum puruShatantrakke ashakyamum Ada । sikkagaLa kante jaga - Mankutimma ॥ 242 ॥
ನಮ್ಮ ಜಗತ್ತುಒಟ್ಟಾದ , ಬೇರೆ ಬೇರೆಯಾದ, ನಿಯಂತ್ರಕ್ಕೊಳಗಾದ, ಸ್ವತಂತ್ರವಾದ, ತರ್ಕಿಸಬಹುದಾದ, ತರ್ಕಕ್ಕೆ ನಿಲುಕದ ವಿಷಯಗಳು ಚಿತ್ರವಿಚಿತ್ರವಾಗಿ ಸಮ್ಮಿಶ್ರವಾಗಿ ಮತ್ತು ಮಾನವರಿಗೆ ಸಾಧ್ಯವಾದ ಮತ್ತು ಅಸಾಧ್ಯವಾದ ವಿಷಯಮತ್ತು ಕಾರ್ಯಗಳಿಂದ ಕೂಡಿದ ಒಗಟು ಒಗಟಾದ, ಗಂಟು ಗಂಟಾದ ವಿಷಯಗಳಿಂದ ಕೂಡಿದೆ ಎಂದು ಹಲವು ವೈವಿಧ್ಯತೆಗಳನ್ನು ಈ ಕಗ್ಗದಲ್ಲಿ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"Oneness and multiplicity, controlled and independent, logical and illogical, things are achievable by man's endeavors and those that are impossible are all mixed up in this picture of the world which is a knotty mess." - Mankutimma
Video Coming Soon
Detailed video explanations by scholars and experts will be available soon.