Back to List

Kagga 239 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ । ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ ॥ ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ । ನಮಗವಳ್ ಪ್ರಸ್ಪರ್ಧಿ - ಮಂಕುತಿಮ್ಮ ॥ ೨೩೯ ॥

samavilla sRuShTiyali, naranante naranilla । kShameyum avaLoLagilla, karmadante phala ॥ kramavonda nImAgisiri nOLpe nAnu enute । namagavaL praspardhi - Mankutimma ॥ 239 ॥

Meaning in Kannada

ಅಸಮತೆಯೇ ಸೃಷ್ಟಿಯ ಗುಣ. ಹಾಗಾಗಿ ಸೃಷ್ಟಿ ಸಮವಿಲ್ಲ ಅಥವಾ ಸೃಷ್ಟಿಯಲ್ಲಿ ಸಮಾನತೆ ಇಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಂತೆ ಇಲ್ಲ. ಪ್ರತಿಯೊಬ್ಬನೂ ಅವನವನ ಕರ್ಮಾನುಸಾರವಾಗಿ ತನ್ನ ಕರ್ಮಫಲವನ್ನು ಅನುಭವಿಸುತ್ತಾನೆ. ಹಾಗೇನಾದರೂ ನಾವೇನಾದರೂಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತೇನೆಂದು ಸೃಷ್ಟಿಗೆ ಒಂದು ಸ್ಪರ್ಧೆಯನ್ನು ಕೊಟ್ಟರೆ, ಸೃಷ್ಟಿಯೇ ನಮಗೆ ಪ್ರತಿಸ್ಪರ್ಧಿಯಾಗುತ್ತದೆ ಎಂದು ಮಾನ್ಯ ಗುಂಡಪ್ಪನವರು ನಮಗೆ ಅರುಹುತ್ತಾರೆ ಈ ಕಗ್ಗದಲ್ಲಿ.

Meaning & Interpretation

"There is very little likeness in the creation. One man is not like the other. This gives the feeling that it is all random. But Nature seems to have a good hold of the whole act and runs it according to a plan. She has no forgiveness. She makes sure that one always faces consequences of his action - good or bad. If you think you can alter any one process in her order, she will challenge you. She is your adversary then. " - Mankutimma

Themes

MoralityNatureLove

Video Section

Video Coming Soon

Detailed video explanations by scholars and experts will be available soon.