Back to List

Kagga 238 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ । ತನುವಂಗಗಳೊಳೊಂದು, ರೂಪ ಗುಣ ಬೇರೆ ॥ ಮನದೊಳೊಬ್ಬೊಬ್ಬನೊಂದೊಂದು, ಪ್ರಪಂಚವಿಂ । ತನುವೇಕದೊಳ್ ಬಹುಳ - ಮಂಕುತಿಮ್ಮ ॥ ೨೩೮ ॥

manuja kulavondu obbanu innobbanante illa । tanuvu angagaLoLu ondu, rUpa guNa bEre ॥ manadoLu obbobbanu ondondu, prapanchavim । tanuvEkadOL bahuLa - Mankutimma ॥ 238 ॥

Meaning in Kannada

ಮನುಷ್ಯರಲ್ಲಿ ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ದೇಹದ ಅಂಗಾಂಗಗಳೆಲ್ಲ ಒಂದೇ ರೀತಿ ಇದ್ದರೂ ರೂಪ ಬೇರೆ ಮತ್ತು ಗುಣಗಳೂ ಬೇರೆ ಬೇರೆ. ಮನದೊಳಗೆ ಪ್ರತಿಯೊಬ್ಬನದೂ ಒಂದೊಂದು ವಿಚಾರ. ಅದೇ ಒಂದು ಬೇರೆ ಪ್ರಪಂಚವಿದ್ದಂತೆ. ಇಡೀ ಜಗತ್ತೇ ಅನೇಕತೆಯಲ್ಲಿ ಏಕತೆಯ ರೂಪ ಎಂದು ಅನೇಕತೆಯಲ್ಲಿ ಏಕತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Mankind is thus. Each individual is unique. They may resemble each other in form - body and organs. But in terms of qualities and character, they are all different. In their mind each one lives in their own world (with them as the center). This is the paradox of people being different and the same." - Mankutimma

Themes

LifeSociety

Video Section

Video Coming Soon

Detailed video explanations by scholars and experts will be available soon.