Back to List

Kagga 240 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೆರಳುಗಳ ನೋಡವುಗಳೊಂದರಂತೊಂದಿಲ್ಲ । ಕರಧರ್ಮಕುಚಿತವಾ ಹೆಚ್ಚು ಕಡಮೆಗಳು ॥ ಪುರಳ ಪಿಡಿವುವೆ ಬೆರಳ್ಗಳೆಲ್ಲಮೊಂದುದ್ದವಿರೆ? । ಸರಿಯಹುದು ಕಾರ್ಯದಲಿ - ಮಂಕುತಿಮ್ಮ ॥ ೨೪೦ ॥

beraLugaLa nODu avugaLa ondarantondilla । karadharmake uchitavu A hecchu kaDimegaLu ॥ puraLa piDivuve beraLgaLu ellamu onduddavire? । sariyahudu kAryadali - Mankutimma ॥ 240 ॥

Meaning in Kannada

ನಮ್ಮ ಕೈ ಬೆರಳುಗಳು ಒಂದೇ ಉದ್ದವಿಲ್ಲ. ಕೈಗಳು ಮಾಡಬೇಕಾದ ಕೆಲಸಕಾರ್ಯಗಳಿಗೆ ಅವುಗಳ ಉದ್ದದಲ್ಲಿರುವ ಹೆಚ್ಚು ಕಡಿಮೆಗಳು ಸರಿಯಾಗೇ ಇದೆ. ಹಾಗೇನಾದರೂ ಎಲ್ಲ ಬೆರಳುಗಳೂ ಒಂದೇ ಉದ್ದ ಇದ್ದಿದ್ದಿದ್ದರೆ, ನಾವು ಕೈಬೆರಳುಗಳಿಂದ ಯಾವ ವಸ್ತುವನ್ನಾದರೂ ಹಿಡಿಯಲು ಆಗುತ್ತಿತ್ತೇ? ಹಾಗಾಗಿ ಈ ಅಸಮತೆಯು ಕೈಗಳ ಕೆಲಸ ಕಾರ್ಯಗಳಿಗೆ ಸರಿಯಾಗೇ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Look at out fingers. No two of them are alike. For the fingers, it is good to be dissimilar like that. Can the fingers hold any thing firmly if they were all alike? They are good as they are - dissimilar." - Mankutimma

Themes

Morality

Video Section

Video Coming Soon

Detailed video explanations by scholars and experts will be available soon.