Back to List

Kagga 226 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಉಸಿರವೊಲನುಕ್ಷಣಂ ಪುರುಷನೊಳವೊಗುತವನ । ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ॥ ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ । ಬೆಸಸುತಿಹುದೇಗಳುಂ - ಮಂಕುತಿಮ್ಮ ॥ ೨೨೬ ॥

usiravol anukShaNam puruShana oLavoguta avana । posabanam geydu daivika sattvam avanum ॥ posatanu avan uLida lOkake nIDe duDivante । besasutihudu EgaLum - Mankutimma ॥ 226 ॥

Meaning in Kannada

ಉಸಿರು ನಮ್ಮ ದೇಹದೊಳಕ್ಕೆ ಹೊಕ್ಕು, ನಮಗೆ ಪ್ರತಿ ಉಸಿರಾಟದಲ್ಲೂ ಒಂದು ಹೊಸತನವನ್ನು ನೀಡುವಂತೆ ಆ ಪರಮಾತ್ಮ ತತ್ವವು ಮನುಷ್ಯನ ಒಳಹೊಕ್ಕು ಅವನಿಗೆ ಹೊಸತನವನ್ನು ನೀಡಿ ಲೋಕಕ್ಕೆ ಹೊಸತನವನ್ನು ನೀಡಲು ದುಡಿಯುವಂತೆ ಪ್ರೇರೇಪಿಸುತ್ತದೆ. ಈ ರೀತಿಯ ಪರಸ್ಪರ ಬೆಸುಗೆ ಪರಮಾತ್ಮ ತತ್ವಕ್ಕೂ ಮನುಷ್ಯನಿಗೂ ಸದಾಕಾಲ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"When a man inhales, the breath makes hims fresh and a 'new' man. The cosmic spirit is the force behind this freshness and makes the 'fresh him' work so that he can distribute the freshness to the rest of the world. This world order is maintained for ever." - Mankutimma

Themes

LifePeaceDuty

Video Section

Video Coming Soon

Detailed video explanations by scholars and experts will be available soon.