Back to List

Kagga 227 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ । ಯತ್ನಮೆ ಪೌರುಷಪ್ರಗತಿ; ಅದೆ ಪ್ರಕೃತಿ ॥ ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ । ಧನ್ಯತೆಯ ಬೆದಕಾಟ - ಮಂಕುತಿಮ್ಮ ॥ ೨೨೭ ॥

nUtnateya pUrNateya ananyUnateya gaLipa । yatname pauruSha pragati, ade prakRuti ॥ vijnAna shAstra kale kAvya vidyegaLella । dhanyateya bedakATa - Mankutimma ॥ 227 ॥

Meaning in Kannada

ಹೊಸತನವನ್ನು ಪೂರ್ಣತೆಯನ್ನು ಕುಂದಿಲ್ಲದ್ದನ್ನು ಗಳಿಸುವ ಪ್ರಯತ್ನವೇ ಪುರುಷನ ಪ್ರಗತಿಯ ಪ್ರತೀಕ. ಪ್ರಕೃತಿಯನ್ನು ಆರಾಧಿಸುವುದು, ವಿಜ್ಞಾನ, ಕಲೆ, ಕಾವ್ಯ, ಸಾಹಿತ್ಯ, ಸಂಗೀತ ಮುಂತಾದ ವಿದ್ಯೆಗಳೆಲ್ಲವೂ ಮನುಷ್ಯ ಪರಿಪೂರ್ಣತೆಯಡೆಗೆ ನಡೆಯಲು ಬೇಕಾದ ಸಾಧನಗಳು ಮತ್ತು ಅವುಗಳ ಮೂಲಕವೇ ಪರಿಪೂರ್ಣತೆಯ ಸಾಧನೆ ಸಾಧ್ಯವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ್ದಾರೆ.

Meaning & Interpretation

"Mankind's progress is measured by trying to achieve freshness, completeness, lack of void. That is very natural. Science, scriptures, arts, poetry and education are all man's way of feeling satisfied with his progress." - Mankutimma

Themes

Love

Video Section

Video Coming Soon

Detailed video explanations by scholars and experts will be available soon.