Mankutimmana Kagga by D.V. Gundappa
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ । ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ॥ ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ । ಭರಿಸುತಿರುವುದು ಬಾಳ - ಮಂಕುತಿಮ್ಮ ॥ ೨೨೫ ॥
sharadhiya oLagaNa vastugaLanu alachi jAlisuva । tereyante vishva sattvada lahari namma ॥ horagu oLagugalali santata neredu hariyutta । bharisutiruvudu bALa - Mankutimma ॥ 225 ॥
ಸಮುದ್ರದೊಳಗಿರುವ ವಸ್ತುಗಳನ್ನು ಕೇರಿ ಜಾಲಿಸುವ ಸಾಗರದ ತೆರೆಗಳಂತೆ, ಈ ಜಗತ್ತಿನ ಸೃಷ್ಟಿಯ ತತ್ವಗಳು ನಮ್ಮ ಒಳಗು ಹೊರಗುಗಳಲ್ಲಿ ತುಂಬಿ ಹರಿಯುತ್ತಾ ನಮ್ಮ ಜೀವನವನ್ನು ಭರಿಸುತ್ತಿದೆ ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"The waves of the sea are relentless. They keep bringing to shore precious things from the bottom of the sea. The cosmic spirit is also relentless like the waves. It flows inside and outside of us for ever and fills us with life." - Mankutimma
Video Coming Soon
Detailed video explanations by scholars and experts will be available soon.