Back to List

Kagga 223 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಡೆಯನಾವೆಡೆ ಸಾರ್ದನೆಂದು ಪದವಾಸನೆಯ । ತಡಕಿ ಮೂಸುತ ಶುನಕನಲೆದಾಡುವಂತೆ ॥ ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ । ಬೆಡಗು ಶಿವನೊಡವೆಯದೊ - ಮಂಕುತಿಮ್ಮ ॥ ೨೨೩ ॥

oDeyanu AvaDe sArdanendu pada vAsaneya । taDaki mUsuta shunakanu aledADuvante ॥ baDa jagavanu oLitakendu attitta puDukisuva । beDagu shivana oDaveyado - Mankutimma ॥ 223 ॥

Meaning in Kannada

ತನ್ನ ಒಡೆಯ ಎತ್ತ ಹೋದನೆಂದು ಅವನ ಕಾಲ ವಾಸನೆಯನ್ನು ಮೂಸುತ್ತಾ ಅಲೆಯುವ ನಾಯಿಯಂತೆ, ಈ ಜಗತ್ತಿನಲ್ಲಿ ತನಗೆ ಒಳಿತಾವುದು ಎಂದುನಾವುಹುಡುಕುವಂತೆ ಮಾಡುವ ಈ ಲೋಕಮಾಯೆಯೇ ಆ ಪರಶಿವನ ಅಲಂಕಾರದ ಒಡವೆಯೋ ಎಂದು ಒಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"A dog can trace his master's footsteps by catching the scent and finally reach him. Man searches for God's artistry just like that in this poor world. The things true and beautiful are the dropped ornaments of Him (lord Shiva)." - Mankutimma

Themes

DevotionLifeDeath

Video Section

Video Coming Soon

Detailed video explanations by scholars and experts will be available soon.