Mankutimmana Kagga by D.V. Gundappa
ಆವುದೋ ಒಳಿತೆಂದು ಆವುದೋ ಸೊಗವೆಂದು । ಆವಾವ ದಿಕ್ಕಿನೊಳಮಾವಗಂ ಬೆದಕಿ ॥ ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ । ಭಾವುಕದ ನೆಲೆಯ ಕರೆ - ಮಂಕುತಿಮ್ಮ ॥ ೨೨೨ ॥
AvudO oLitendu AvudO sogavendu । AvAva dikkinoLam Avagam bedaki ॥ jIva paridhAvipavol AgipantarvRutti । bhAvukada neleya kare - Mankutimma ॥ 222 ॥
ಯಾವುದೋ ಒಳ್ಳೆಯದೆಂದು ಮತ್ಯಾವುದೋ ಸೊಗಸೆಂದು ಬೇರೆ ಬೇರೆ ದಿಕ್ಕಿನಲ್ಲಿ ಸದಾಕಾಲ ಹುಡುಕುತ್ತಾ ಓಡುವಂತೆ ಮಾಡುವ ನಮ್ಮ ಅಂತರ್ಯಕ್ಕೆ ಇಂಬುನೀಡುವುದು ನಮ್ಮ ನಮ್ಮ ಭಾವನೆಯ ಕೂಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"We always seek something good and beautiful in what we already don't have. We struggle and wander in different direcions seeking the same. Man's mind will drive his life into circles behind these longings. The mind does this to find solace nad peace." - Mankutimma
Video Coming Soon
Detailed video explanations by scholars and experts will be available soon.