Mankutimmana Kagga by D.V. Gundappa
ಅರೆಗಳಿಗೆಯನುಭವವೆ ಮಾನಸವ ಕರಗಿಸದೆ? । ಪರಿಪಕ್ವಗೊಳಿಸದೇನದು ಜೀವರಸವ? ॥ ಉರಿ ತಣಿಪುಗಳಿನಾತ್ಮಸಂಸ್ಕಾರಗಳನೆಸಪ । ಪುರಳ ಪುಸಿಯೆನ್ನುವೆಯ? - ಮಂಕುತಿಮ್ಮ ॥ ೨೨೧ ॥
are gaLigeya anubhavave mAnasava karagisade? । paripakvagoLisadenu adu jIvarasava ॥ uri taNipugaLu ina Atma samskAragaLanu esapa । puraLa pusiyennuveya? - Mankutimma ॥ 221 ॥
ಜೀವನದಲ್ಲಿ ಒಂದು ಅರೆಗಳಿಗೆಯಲ್ಲಿ ಆಗುವ ಅನುಭವವು ನಮ್ಮ ಮನಸ್ಸನ್ನು ಕರಿಗಿಸದೆ? ನಮ್ಮಲ್ಲಿ ಹರಿಯುವ ಜೀವರಸವನ್ನು ಪರಿಪಕ್ವಗೊಳಿಸದೇನುಅದು? ಉರಿ ಮತ್ತು ಶೀತಲತೆಗಳು ಆತ್ಮವನ್ನು ಸಂಸ್ಕರಿಸುವ ಆ ತಿರುಳನ್ನು, ಸತ್ವವನ್ನು ಹುಸಿಯನ್ನುತೀಯಾ ನೀನು? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
"An experience lasting just half a second is enough to soften us. Don't such experiences bring clarity and refines our convictions in life? These experiences could be pleasant or troublesome. But they touch your soul and their effect is real. Can we deny that?" - Mankutimma [Translator's note: This is a question to the people who say that life has to be led entirely objectively based only on facts and feelings are unreal.]
Video Coming Soon
Detailed video explanations by scholars and experts will be available soon.