Back to List

Kagga 220 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ । ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ॥ ಗಂಧಾನಿಲಂಗಳವು ಪರಸತ್ತ್ವಪುಷ್ಪದವು । ಸಂದೇಹವೇನಲವೊ - ಮಂಕುತಿಮ್ಮ ॥ ೨೨೦ ॥

saundarya bAndhavyagaLu satyavalladoDe । kunduvaDeyada satyavu iLeyoLu innelli? ॥ gandha anilangaLavu parasattva puShpadavu । sandEhavEnalavo - Mankutimma ॥ 220 ॥

Meaning in Kannada

ಈ ಜಗತ್ತಿನ ಸೌಂದರ್ಯ, ಬಾಂಧವ್ಯಗಳು ಸತ್ಯವಲ್ಲದಿದ್ದರೆ, ಕುಂದದ, ಕಡಿಮೆಯಾಗದ ಸತ್ಯವು ಈ ಜಗತ್ತಿನಲ್ಲಿ ಎಲ್ಲಿದೆ ಎಂದರೆ ಪುಷ್ಪದಲ್ಲಿ ಉತ್ತಮವಾದ ಸತ್ವದಂತೆ ಬಂದು ಸೇರುವ ಗಂಧದಂತೆ ಈ ಜಗತ್ತಿನಲ್ಲಿ ಪರಮಾತ್ಮ ತತ್ವದಿಂದ ಈ ಸೌಂದರ್ಯ ಬಾಂಧವ್ಯಗಳೆಲ್ಲ ಬಂದು ಸೇರಿವೆ, ಇದರಲ್ಲಿ ಸಂದೇಹವೇನೂ ಇಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"If beauty and compassion (relationship) are not true then what else in this world can be called as truth? Everything else either falls short or breaks down when challenged. Beauty and love are the fragrances of the flower that represents the cosmic spirit. Why is there any doubt about this?" - Mankutimma

Themes

WisdomLifeNatureSocietyLove

Video Section

Video Coming Soon

Detailed video explanations by scholars and experts will be available soon.