Mankutimmana Kagga by D.V. Gundappa
ಅರೆಯರೆಯ ನಮಗೆ ತೋರ್ಪೊಲವು ಚೆಲುವುಗಳೆಲ್ಲ । ಪರಿಪೂರ್ಣ ಸುಖ ಸತ್ತ್ವ ಸಾಗರದ ತೆರೆಗಳ್ ॥ ತರಣಿ ದೂರದೊಳಿಹನು; ಕಿರಣ ನಮಗೆಟಕುವುದು । ತೆರೆಯು ನೆರೆತದ ಕುರುಹೊ - ಮಂಕುತಿಮ್ಮ ॥ ೨೧೯ ॥
areyareya namage tOrpa olavu cheluvugaLella । paripUrNa sukha sattva sAgarada teregaL ॥ taraNi dUradoLihanu; kiraNa namage eTakuvudu । tereyu neretada kuruho - Mankutimma ॥ 219 ॥
ನಮಗೆ ಕಾಣುವ ಒಲವು ಚೆಲುವುಗಳೆಲ್ಲ, ಅರೆ ಬರೆ. ಒಂದು ಪರಿಪೂರ್ಣತೆಯ ಅಪೂರ್ಣ ರೂಪ. ಮಹಾನ್ ಸಾಗರದಲ್ಲಿ ಎದ್ದ ತೆರೆಗಳಂತೆ. ಹೇಗೆ ದೂರದಲ್ಲಿರುವ ಸೂರ್ಯನ ಕಿರಣಗಳನ್ನು ಮಾತ್ರ ನಾವು ಕಾಣುತ್ತೇವೆಯೋ, ಹೇಗೆ ಉಕ್ಕುವ ಸಾಗರದ ತೆರೆಗಳನ್ನು ಮಾತ್ರ ನಾವು ನೋಡಲಿಕ್ಕಾಗುತ್ತದೆಯೋ, ಹಾಗೆ ಪರಬ್ರಹ್ಮನ ಈ ಸೃಷ್ಟಿಯಲ್ಲಿಯೂ ಸಹ ನಾವು ನೋಡುವುದು ಕೇವಲ ಹೊರನೋಟ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.
"The complete truth about the cosmic spirit is vast. What little love and beauty we see (and get happy) in this world are mere waves that reach the shore. The sea of complete love and happiness is the cosmic spirit. Just like the rays of the Sun which is so far is an undeniable proof of the existence of the Sun, the waves are the proof of the existence of that ocean of happiness." - Mankutimma
Video Coming Soon
Detailed video explanations by scholars and experts will be available soon.